ಇಸ್ಲಮಾಬಾದ್, ಫೆ.24 (DaijiworldNews/AA): ಇಷ್ಟರಲ್ಲೇ ತಂಡದಲ್ಲಿರುವ ಸ್ಟಾರ್ ಆಟಗಾರರು ನಿವೃತ್ತರಾಗಲಿದ್ದಾರೆ ಎಂಬ ಸುಳಿವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಕೋಚ್ ಮತ್ತು ಆಯ್ಕೆದಾರ ರಶೀದ್ ಲತೀಫ್ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವಿಶ್ಲೇಷಿಸಲು ರಶೀದ್ ಲತೀಫ್ ಅವರು ಪಾಕಿಸ್ತಾನಿ ಟಿವಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ನಿರೂಪಕನೊಬ್ಬ, ತಂಡದ ಸ್ಟಾರ್ ಕ್ರಿಕೆಟಿಗನೊಬ್ಬ ಇಷ್ಟರಲ್ಲೇ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಏನು ಹೇಳ್ತೀರಿ ಎಂಬ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಲತೀಫ್, ಮುಂದಿನ ದಿನಗಳಲ್ಲಿ ಅದರ ಬಗ್ಗೆ ತಿಳಿಯಲಿದೆ ಎಂದಿದ್ದಾರೆ.
ಮುಂದುವರೆದು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಕ್ಕಾಗಿ ಲತೀಫ್ ನಿರೂಪಕರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಇನ್ನು ಮುಂದೆ ನಾನು ನಿನಗೆ ತಂಡದ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ತಿಳಿಸಿದರು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಪಾಕ್ ಸೋಲುವ ಮೂಲಕ ಸತತ ಎರಡು ಸೋಲುಗಳನ್ನು ಕಂಡಂತಾಗಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಪ್ರಯಾಣ ಲೀಗ್ ಹಂತದಲ್ಲೇ ಅಂತ್ಯಗೊಳ್ಳುವ ಆತಂಕ ಪಾಕ್ಗೆ ಎದುರಾಗಿದೆ. ಜೊತೆಗೆ ಮಾಜಿ ಆಟಗಾರರು ಹಾಗೂ ಅನುಭವಿಗಳು ಪಾಕ್ ಆಟಗಾರರನ್ನು ಟೀಕಿಸುತ್ತಿದ್ದಾರೆ.