ನವದೆಹಲಿ, ಜೂ 12 (Daijiworld News/SM): ವಿಶ್ವಕಪ್ ಮಹಾಸಮರದಲ್ಲಿ ಜೂನ್ 16ರಂದು ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಲ್ಲಿದ್ದಾರೆ. ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಐಸಿಸಿ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪಾಕ್ ಗೆ ಮಂಡಿಯೂರಿದ ಇತಿಹಾಸವೇ ಇಲ್ಲ. ಪಾಕಿಸ್ತಾನ 1983ರಲ್ಲಿದ್ದಂತಹ ತಂಡದ ರೀತಿಯಲ್ಲಿ ಇಂದು ಇಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವಕಪ್ನಲ್ಲೂ ಭಾರತ ಸುಲಭ ಗೆಲುವು ದಾಖಲು ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪ್ರಸಕ್ತ ವಿಶ್ವಕಪ್ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಕೊಹ್ಲಿ ಸೇನೆ ಈ ಸಲವೂ ಪಾಕ್ ವಿರುದ್ಧ ಗೆಲುವು ದಾಖಲು ಮಾಡುವುದು ಖಚಿತ. ಈ ಹಿಂದಿನ ರೆಕಾರ್ಡ್ ಮುಂದುವರೆಸಲಿದೆ ಎಂದಿದ್ದಾರೆ.1983ರಲ್ಲಿ ಪಾಕಿಸ್ತಾನ ತಂಡ ಬಲಿಷ್ಟವಾಗಿತ್ತು. ಭಾರತಕ್ಕಿಂತಲೂ ಸದೃಢವಾಗಿತ್ತು. ಆದರೆ ಇದೀಗ ಭಾರತ ಹೆಚ್ಚು ಬಲಿಷ್ಠವಾಗಿದ್ದು, ಪಾಕ್ ಗೆ ಮಂಡಿಯೂರುವ ಯಾವುದೇ ಲಕ್ಷಣಗಳಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ಜೂನ್ ೧೬ರಂದು ಮಾಂಚಿಸ್ಟರ್ ನಲ್ಲಿ ನಡೆಯುವ ಪಂದ್ಯ ಹೈ ಓಲ್ಟೇಜ್ ಪಂದ್ಯವಾಗಿದ್ದು, ಈಗಾಗಲೇ ಅಭಿಮಾನಿಗಳು ತಮ್ಮ ಸೀಟ್ ಕಾಯ್ದಿರಿಸಿದ್ದಾರೆ. ರವಿವಾರದ ರಜಾ ದಿನದಂದು ನಡೆಯುವ ಈ ಕದನ ವೀಕ್ಷಣೆಗೆ ಪ್ರೇಕ್ಷಕರು ಕಾತರದಲ್ಲಿದ್ದಾರೆ.