ಇಸ್ಲಮಾಬಾದ್, ಡಿ.13(DaijiworldNews/AA): ಪಾಕಿಸ್ತಾನ ಕ್ರಿಕೆಟ್ ತಂಡದ ಸಹಾಯಕ ಕೋಚ್ ಟಿಮ್ ನೀಲ್ಸನ್ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸಲಾಗಿದೆ.

ಕಳೆದ ಆಗಸ್ಟ್ನಲ್ಲಿ ಟೆಸ್ಟ್ ತಂಡದ ಸಹಾಯಕ ಕೋಚ್ ಆಗಿ ಟಿಮ್ ನೀಲ್ಸನ್ ಅವರು ನೇಮಕಗೊಂಡಿದ್ದರು. ಅವರು ಪಾಕಿಸ್ತಾನದ ಟೆಸ್ಟ್ ತರಬೇತುದಾರ ಜೇಸನ್ ಗಿಲ್ಲೆಸ್ಪಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಅವರನ್ನು ಈ ಹುದ್ದೆಯಿಂದ ವಜಾ ಮಾಡಲಾಗಿದೆ.
ಟಿಮ್ ನೀಲ್ಸನ್ ಅವರ ಒಪ್ಪಂದವನ್ನು ನವೀಕರಿಸುವ ಹಂಬಲ ಪಿಸಿಬಿ ಇರಲಿಲ್ಲ. ಹೀಗಾಗಿ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಿದೆ. ಇದಲ್ಲದೆ ನೀಲ್ಸನ್ ಅವರನ್ನು ಈ ಹುದ್ದೆಯಿಂದ ತೆಗೆದುಹಾಕುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಪಿಸಿಬಿ ಗಿಲ್ಲೆಸ್ಪಿಯಿಂದ ಯಾವುದೇ ಸಲಹೆಯನ್ನು ಪಡೆದಿಲ್ಲ. ಹಾಗೂ ಅದರ ಬಗ್ಗೆ ಅವರಿಗೆ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ಗಿಲ್ಲೆಸ್ಪಿ ಅಸಮಾದಾನಗೊಂಡಿರುವ ಬಗ್ಗೆ ವರದಿಯಾಗಿದೆ.