ಸಿಂಗಾಪುರ, ಡಿ.12(DaijiworldNews/AA): ಸಿಂಗಾಪುರದಲ್ಲಿ ನಡೆದ 2024 ರ ವಿಶ್ವ ಚೆಸ್ ಚಾಂಪಿಯನ್ಶಿಪ್ ಕೊನೆಯ ಹಾಗೂ 14ನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತದ 18 ವರ್ಷದ ಗ್ರ್ಯಾಂಡ್ಮಾಸ್ಟರ್ ಡಿ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಚೀನಾದ ಪ್ರಶಸ್ತಿ ವಿಜೇತ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್ಮಾಸ್ಟರ್ ಡಿ ಗುಕೇಶ್ ಗುರುವಾರ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.
14 ಪಂದ್ಯಗಳ ಕೊನೆಯ ಕ್ಲಾಸಿಕಲ್ ಗೇಮ್ ಅನ್ನು ಗೆದ್ದ ನಂತರ ಲಿರೆನ್ ಅವರ 6.5 ಗೆ ಹೋಲಿಸಿದರೆ ಗುಕೇಶ್ 7.5 ಅಂಕಗಳನ್ನು ಗಳಿಸಿದರು. ಈ ಮೂಲಕ ಗುಕೇಶ್ ಅವರು ವಿಶ್ವನಾಥನ್ ಆನಂದ್ ನಂತರ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಗೆದ್ದ 2ನೇ ಭಾರತೀಯನೆನಿಸಿಕೊಂಡಿದ್ದಾರೆ.