ಮುಂಬೈ, 10(DaijiworldNews/AK):ಅಡಿಲೇಡ್ ಟೆಸ್ಟ್ನಲ್ಲಿ 10 ವಿಕೆಟ್ಗಳ ಸೋಲನ್ನು ಎದುರಿಸಿದ ಟೀಂ ಇಂಡಿಯಾ ಪ್ರಸ್ತುತ ಬ್ರಿಸ್ಬೇನ್ ಟೆಸ್ಟ್ಗೆ ತಯಾರಿ ಆರಂಭಿಸಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ಗೆ ಟೀಂ ಇಂಡಿಯಾದ ಎಲ್ಲಾ ಆಟಗಾರರು ತಯಾರಿ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಕೂಡ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರು.
ಆದರೆ, ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರು ಎಸೆದ ಎಸೆತ ರಿಷಬ್ ಪಂತ್ ಗಾಯಗೊಳ್ಳುವಂತೆ ಮಾಡಿದೆ. ಬ್ರಿಸ್ಬೇನ್ನ ಗಾಬಾದಲ್ಲಿ ನಡೆಯಲಿರುವ ಟೆಸ್ಟ್ಗೆ ತಯಾರಿ ನಡೆಸುತ್ತಿದ್ದಾಗ ಪಂತ್ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪಂತ್ ಅವರ ಗಾಯ ಅಷ್ಟು ಗಂಭೀರವಾಗಿಲ್ಲ. ಹೀಗಾಗಿ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡು ಬಳಿಕ ಮತ್ತೆ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ.
ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರು ರಿಷಬ್ ಪಂತ್ಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ರಘು ಅವರು ಸೈಡ್ ಆರ್ಮ್ ಬೌಲಿಂಗ್ ಮಾಡುವ ಮೂಲಕ ಅಭ್ಯಾಸದಲ್ಲಿ ಪಂತ್ಗೆ ಸಹಾಯ ಮಾಡುತ್ತಿದ್ದರು. ಈ ವೇಳೆ ರಘು ಎಸೆದ ಚೆಂಡು ನೇರವಾಗಿ ಪಂತ್ ಅವರ ಹೆಲ್ಮೆಟ್ಗೆ ಬಡಿಯಿತು. ಹೀಗಾಗಿ ಪಂತ್ ಗಾಯಗೊಂಡರು. ರಿಷಬ್ ಪಂತ್ ಗಾಯಗೊಂಡ ನಂತರ ಬ್ಯಾಟಿಂಗ್ ಅಭ್ಯಾಸವನ್ನು ನಿಲ್ಲಿಸಿದರು.