ಅಡಿಲೇಡ್, ಡಿ.09(DaijiworldNews/AK):ಬಾರ್ಡರ್ ಗವಾಸ್ಕರ್ ಟ್ರೋಫಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್ ಹಾಗೂ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನಡುವೆ ನಡೆದ ವಾಗ್ದಾದ ಐಸಿಸಿ ಅಂಗಳ ಬಂದಿದೆ. . ಇದರಿಂದ ಇಬ್ಬರ ವಿರುದ್ಧವೂ ಐಸಿಸಿ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಹೌದು. ಭಾರತ ಮತ್ತು ಆಸೀಸ್ ನಡುವಿನ 2ನೇ ಟೆಸ್ಟ್ ಪಂದ್ಯದ ವೇಳೆ ಆಸೀಸ್ನ ಮೊದಲ ಇನ್ನಿಂಗ್ಸ್ನಲ್ಲಿ ಸಿರಾಜ್ ಎಸೆದ ಯಾರ್ಕರ್ಗೆ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್ ಆಗಿದ್ದರು. ಅಷ್ಟರಲ್ಲಾಗಲೇ 140 ರನ್ ಬಾರಿಸಿದ್ದರು. ಟ್ರಾವಿಸ್ ಹೆಡ್ ಔಟಾಗುತ್ತಿದ್ದಂತೆ ʻವೆಲ್ ಬೌಲ್ʼ ಎಂದು ಹೇಳಿರುವುದಾಗಿ ಹೇಳಿಕೊಂಡಿದ್ದಾರೆ.
ಈ ವೇಳೆ ಸಿರಾಜ್ ಅವರು ತೋರಿದ ಅತಿರೇಖದ ವರ್ತನೆ ಈಗ ಚರ್ಚೆಗೆ ಗ್ರಾಸವಾಗಿದೆ. ಔಟಾದ ಬಳಿಕ ಸಿರಾಜ್ಗೆ ಹೆಡ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಆದರೆ ಅವರಿಬ್ಬರ ನಡುವೆ ವಿನಿಮಯವಾದ ಮಾತುಗಳು ಏನು ಎನ್ನುವುದು ಸ್ಪಷ್ಟವಾಗಿಲ್ಲ. ಆದ್ರೆ ಇದನ್ನು ಅಭಿಮಾನಿಗಳು ಸುಮ್ಮನೆ ಬಿಡಲಿಲ್ಲ. ಸಿರಾಜ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ಗೆ ನಿಂತಿದ್ದಾಗ ಆಸ್ಟ್ರೇಲಿಯಾ ಪ್ರೇಕ್ಷಕರು ʻಬೂʼ ಎಂದು ಅವರನ್ನು ಅಣುಕಿಸಿದ್ದರು. ಈ ವಿವಾದ ಐಸಿಸಿ ಅಂಗಳ ತಲುಪಿದ್ದು, ಇಬ್ಬರಿಗೂ ದಂಡ ವಿಧಿಸುವ ಅಥವಾ ಒಂದು ಪಂದ್ಯಕ್ಕೆ ಬ್ಯಾನ್ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.