ಮುಂಬೈ, ಡಿ.08(DaijiworldNews/AA): ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಖಾಲಿಯಾಗಿದ್ದ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಹಂಗಾಮಿ ಕಾರ್ಯದರ್ಶಿಯಾಗಿ ದೇವ್ಜಿತ್ ಸೈಕಿಯಾ ಅವರನ್ನು ನೇಮಕ ಮಾಡಲಾಗಿದೆ.

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ದೇವ್ಜಿತ್ ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ದೇವ್ಜಿತ್ ಅವರು ಸೆಪ್ಟೆಂಬರ್ 2025 ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸಲಿದ್ದಾರೆ.
ದೇವ್ಜಿತ್ ಸೈಕಿಯಾ ಅವರು ಟೀಂ ಇಂಡಿಯಾ ಪರ ಯಾವುದೇ ಪಂದ್ಯವನ್ನಾಡಿಲ್ಲ. ಆದರೆ ಅವರು ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, ಅಸ್ಸಾಂ ತಂಡದ ಪರ ರಣಜಿ ಆಡಿದ್ದಾರೆ. ದೇವ್ಜಿತ್ ಅವರಿಗೆ ಈ ಹುದ್ದೆಯ ಖಾಯಂ ಜವಾಬ್ದಾರಿ ನೀಡಿಲ್ಲ. ಅವರು. ಕೇವಲ 10 ತಿಂಗಳವರೆಗೆ ಬಿಸಿಸಿಐ ಕಾರ್ಯದರ್ಶಿಯಾಗಿರಲಿದ್ದಾರೆ.