ಅಡಿಲೇಡ್, ಡಿ.07 (DaijiworldNews/AK): ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆತಿಥೇ ಯ ಆಸ್ಟ್ರೇ ಲಿಯಾ ಮೊದಲ ಇನಿಂ ಗ್ಸ್ನಲ್ಲಿ 157 ರನ್ಗಳ ಮುನ್ನಡೆಗಳಿಸಿದೆ.

ಅಡಿಲೇ ಡ್ನಲ್ಲಿ ನಡೆಯುತ್ತಿರುವ ಎರಡನೇ ದಿನದಾಟದಲ್ಲಿ ಆಸ್ಟ್ರೇ ಲಿಯಾ ಮೊದಲ ಇನಿಂ ಗ್ಸ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 337 ರನ್ಗಳಿಸಿತು. ಈ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿತು.
ಆಸ್ಟ್ರೇ ಲಿಯಾದ ಬ್ಯಾಟರ್ಗಳಾದಮಾರ್ನ ಸ್ ಲಾಬುಷೇ ನ್ (64) ಅರ್ಧ ಶತಕ ಹಾಗೂ ಟ್ರಾವಿಸ್ ಹೆಡ್ (140) ಶತಕದ ಸಾಧನೆ ಮಾಡಿದರು. ಉಳಿದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಭಾರತ ಮೊದಲ ಇನ್ನಿಂ ಗ್ಸ್ನಲ್ಲಿ 180 ರನ್ಗಳಿಗೆ ಆಲೌಟ್ ಆಗಿತ್ತು. ಆಸೀ ಸ್ ಪಡೆ 157 ರನ್ಗಳ ಮುನ್ನಡೆ ಪಡೆದಿದೆ.
ಭಾರತದ ಪರ ಮಗದೊಮ್ಮೆ ಪರಿಣಾಮಕಾರಿ ಬೌಲಿಂ ಗ್ ಸಂ ಘಟಿಸಿದ ಬಲಗೈ ವೇ ಗದ ಬೌಲರ್ ಜಸ್ಪ್ರೀ ತ್ ಬೂಮ್ರಾ ನಾಲ್ಕು ವಿಕೆಟ್ಗಳನ್ನು ಗಳಿಸಿದ್ದಾರೆ. ಸಿರಾಜ್ ಕೂಡ4 ವಿಕೆಟ್ ಪಡೆದರು.