ಮುಂಬೈ, ಡಿ.06 (DaijiworldNews/TA): ಇಂದೋರ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೃನಾಲ್ ಪಾಂಡ್ಯ ನಾಯಕತ್ವದ ಬರೋಡಾ ತಂಡ 20 ಓವರ್ನಲ್ಲಿ ಬರೋಬ್ಬರಿ 349 ರನ್ ಸಿಡಿಸಿ ವಿಶ್ವ ದಾಖಲೆ ಬರೆದಿದೆ.

ಆರಂಭಿಕರಾಗಿ ಕಣಕ್ಕಿಳಿದ ಬರೋಡಾದ ಶಾಶ್ವತ್ ರಾವತ್ ಹಾಗೂ ಅಭಿಮನ್ಯು ಸಿಂಗ್ 92 ರನ್ ಗಳ ಜೊತೆಯಾಟ ನೀಡಿ ಸ್ಫೋಟಕ ಆರಂಭ ನೀಡಿದರು. ಇದರಲ್ಲಿ ಅಭಿಮನ್ಯು 17 ಎಸೆತಗಳಲ್ಲಿ 53 ರನ್ ಬಾರಿಸಿದ್ರೆ, ಶಾಶ್ವತ್ 16 ಎಸೆತಗಳಲ್ಲಿ 43 ರನ್ ಸಿಡಿಸಿದರು ಎನ್ನಲಾಗಿದೆ.
ಬರೋಡಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 349 ರನ್ ಗಳಿಸಿತು. ಸಿಕ್ಕಿಂ ತಂಡ 20 ಓವರ್ಗಳಲ್ಲಿ ಕೇವಲ 86 ರನ್ಗಳಿಸಿ 7 ವಿಕೆಟ್ ಕಳೆದುಕೊಂಡು 263 ರನ್ಗಳ ಅಂತರದಿಂದ ಸೋಲೊಪ್ಪಿಕೊಂಡಿತು.