ಮುಂಬೈ, ಡಿ.05 (DaijiworldNews/TA): ಸೌತ್ ಆಫ್ರಿಕಾ ಟಿ20 ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಈ ಸರಣಿಗೆ ಅಲಭ್ಯರಾಗಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುತ್ತಿರುವ ನಾಯಕನ ಅನುಪಸ್ಥಿತಿಯಲ್ಲಿ ಹೆನ್ರಿಕ್ ಕ್ಲಾಸೆನ್ ಸೌತ್ ಆಫ್ರಿಕಾ ಟಿ20 ತಂಡದ ಹಂಗಾಮಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನ್ ನಡುವಣ ಟಿ20 ಸರಣಿಯು ಡಿಸೆಂಬರ್ 10 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳನ್ನಾಡಲಿದ್ದು, ಮೊದಲ ಮ್ಯಾಚ್ ಡರ್ಬನ್ನಲ್ಲಿ ನಡೆದರೆ ಎರಡನೇ ಪಂದ್ಯವು ಡಿ.13 ರಂದು ಸೆಂಚುರಿಯನ್ನಲ್ಲಿ ನಡೆಯಲಿದೆ. ಮೂರನೇ ಪಂದ್ಯವು ಜೋಹಾನ್ಸ್ಬರ್ಗ್ನಲ್ಲಿ ಡಿಸೆಂಬರ್ 14 ರಂದು ಜರುಗಲಿದೆ.
ಸೌತ್ ಆಫ್ರಿಕಾ ಟಿ20 ತಂಡದಲ್ಲಿ ಹೆನ್ರಿಕ್ ಕ್ಲಾಸೆನ್ (ನಾಯಕ), ಒಟ್ನೀಲ್ ಬಾರ್ಟ್ಮ್ಯಾನ್, ಮ್ಯಾಥ್ಯೂ ಬ್ರೀಟ್ಝ್ಕ್, ಡೊನೊವನ್ ಫೆರೀರಾ, ರೀಝ ಹೆಂಡ್ರಿಕ್ಸ್, ಪ್ಯಾಟ್ರಿಕ್ ಕ್ರುಗರ್, ಜಾರ್ಜ್ ಲಿಂಡೆ, ಡೇವಿಡ್ ಮಿಲ್ಲರ್, ಕ್ವೆನಾ ಮಫಕಾ, ಆನ್ರಿಕ್ ನೋಕಿಯಾ, ರಿಯಾನ್ ರಿಕೆಲ್ಟನ್, ಎನ್ಕಾಬಾ ಪೀಟರ್, ತಬ್ರೇಝ್ ಶಮ್ಸಿ, ಆಂಡಿಲ್ ಸಿಮೆಲೇನ್, ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಇರಲಿದ್ದಾರೆ.
ಪಾಕಿಸ್ತಾನ್ ಟಿ20 ತಂಡದಲ್ಲಿ ಮೊಹಮ್ಮದ್ ರಿಝ್ವಾನ್ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಹ್ಯಾರಿಸ್ ರೌಫ್, ಜಹಂದಾದ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಹಸ್ನೇನ್, ಒಮೈರ್ ಬಿನ್ ಯೂಸುಫ್, ಮುಹಮ್ಮದ್ ಇರ್ಫಾನ್ ಖಾನ್, ಸೈಮ್ ಅಯ್ಯೂಬ್, ಸಲ್ಮಾನ್ ಅಲಿ ಅಘಾ, ಸೂಫಿಯಾನ್ ಮುಖೀಮ್, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್ ಮತ್ತು ಉಸ್ಮಾನ್ ಖಾನ್ ವಿಕೆಟ್ ಕೀಪರ್ ಆಗಿರಲಿದ್ದಾರೆ.