ಬೆಂಗಳೂರು, ನ.04(DaijiworldNews/AA): 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಹರಾಜಿಗೂ ಮುನ್ನವೇ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೀಗ ಅಭಿಮಾನಿಗಳ ಈ ಆಸೆ ನಿರಾಸೆಯಾಗಿದೆ.
ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರು 2022 ರಿಂದ 2024ರ ವರೆಗೆ ಆರ್ಸಿಬಿ ತಂಡದ ನಾಯಕರಾಗಿದ್ದರು. ಎರಡು ಬಾರಿ ಪ್ಲೇ ಆಫ್ ಹಂತ ತಲುಪಿಸಿದ್ದರೂ, ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ತಂಡ ಮುಗ್ಗರಿಸಿತ್ತು. ಈ ಬಾರಿ ಆರ್ಸಿಬಿ ರಿಟೇನ್ ಆಟಗಾರರ ಪಟ್ಟಿಯಿಂದ ಡುಪ್ಲೆಸಿ ಅವರನ್ನು ಹೊರಗಿಡಲಾಗಿದ್ದು, ಈ ಹಿನ್ನೆಲೆ ಕೊಹ್ಲಿ ಮತ್ತೆ ತಂಡದ ಕ್ಯಾಪ್ಟನ್ ಆಗಲಿದ್ದಾರೆ ಎನ್ನಲಾಗಿತ್ತು. ಜೊತೆಗೆ ತಂಡದ ಮ್ಯಾನೇಜ್ಮೆಂಟ್ ನಾಯಕತ್ವದ ಬದಲಾವಣೆಯ ಕುರಿತು ಈಗಾಗಲೇ ಚರ್ಚೆ ನಡೆಸಿದೆ. ನಾಯಕನಾಗಿ ತಂಡವನ್ನು ಮುನ್ನಡೆಸಲು ಕೊಹ್ಲಿ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಕೋಟ್ಯಂತರ ಅಭಿಮಾನಿಗಳ ಆಸೆಗೆ ಆರ್ಸಿಬಿ ಫ್ರಾಂಚೈಸಿ ತಣ್ಣೀರು ಎರಚಿದೆ.
ನಾಯಕತ್ವದ ಕುರಿತು ಹರಿದಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಆರ್ಸಿಬಿಯ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್, ಈ ವಿಷಯದಲ್ಲಿ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.