ಮುಂಬೈ,ಅ.27(DaijiworldNews/TA): ಕಿವೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತವು ಗೆಲುವು ಗಳಿಸಲು ಹೆಣಗಾಡುತ್ತಿದ್ದಾಗ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ ಯುವ ಯಶಸ್ವಿ ಜೈಸ್ವಾಲ್ ದಾಖಲೆ ಬರೆದಿದ್ದಾರೆ.
1979 ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳ ಮೂಲಕ ಗುಂಡಪ್ಪ ವಿಶ್ವನಾಥ್ ಬರೋಬ್ಬರಿ 1047 ರನ್ ಕಲೆಹಾಕಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ವರ್ಷದೊಳಗೆ ತವರಿನಲ್ಲಿ ಸಾವಿರ ರನ್ ಪೇರಿಸಿದ ಭಾರತದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆ ಜೈಸ್ವಾಲ್ ಪಾಲಾಗಿದೆ.
ಇದೀಗ ದಾಖಲೆ ಪಟ್ಟಿಗೆ ಯಶಸ್ವಿ ಜೈಸ್ವಾಲ್ ಸೇರ್ಪಡೆಯಾಗಿದ್ದಾರೆ. ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಎಂದೇ ಖ್ಯಾತಿ ಪಡೆದ ಇವರು ಈ ವರ್ಷ ತವರಿನಲ್ಲಿ 1000+ ಟೆಸ್ಟ್ ರನ್ ಕಲೆಹಾಕಿದ್ದಾರೆ. ಈ ಮೂಲಕ ಗುಂಡಪ್ಪ ವಿಶ್ವನಾಥ್ ಸಾಧನೆಯನ್ನು ಯಶಸ್ವಿ ಜೈಸ್ವಾಲ್ ಪುನರಾವರ್ತಿಸಿದ್ದಾರೆ. ಗುಂಡಪ್ಪ ವಿಶ್ವನಾಥ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.