ನವದೆಹಲಿ, ಸೆ.11(DaijiworldNews/AA): ಭಾರತೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥೆ ಪಿ.ಟಿ.ಉಷಾರವರು ನನಗೆ ಯಾವುದೇ ಬೆಂಬಲವನ್ನು ನೀಡಲಿಲ್ಲ. ರಾಜಕೀಯ ನಡೆಸುತ್ತಿದ್ದಾರೆ ಎಂದು ವಿನೇಶ್ ಫೋಗಟ್ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿ.ಟಿ.ಉಷಾರವರು ನನ್ನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ಆ ಸಂದರ್ಭ ಒಂದು ಫೋಟೋವನ್ನು ನನಗೆ ಗೊತ್ತಾಗದೇ ತೆಗೆಯಲಾಗಿದೆ. ಅದನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ನನಗೆ ಯಾವುದೇ ಬೆಂಬಲವನ್ನು ನೀಡಲಿಲ್ಲ ಎಂದಿದ್ದಾರೆ.
ನಾನು ಯಾತಕ್ಕಾಗಿ ಕುಸ್ತಿಯನ್ನು ಮುಂದುವರಿಸಬೇಕು? ಎಲ್ಲಾ ಕಡೆಯಲ್ಲೂ ರಾಜಕೀಯ ನಡೆಯುತ್ತಿದೆ. ಒಲಿಂಪಿಕ್ಸ್ ನಲ್ಲಿಯೂ ಅದೇ ರೀತಿ ಆಗಿತ್ತು. ಅನೇಕರು ನನ್ನನ್ನು ಕುಸ್ತಿಯಿಂದ ಹಿಂಜರಿಬೇಡ ಎಂದು ಹೇಳುತ್ತಾರೆ. ಆದರೆ ನಾನೇ ಬೇಡ ಎಂದು ವಿದಾಯ ಹೇಳಿದ್ದೇನೆ ಎಂದು ತಿಳಿಸಿದರು.
ವಿನೇಶ್ ಕುಸ್ತಿಗೆ ವಿದಾಯವನ್ನು ಹೇಳಿದ್ದಾರೆ. ಅದರೊಂದಿಗೆ ರೈಲ್ವೇ ಇಲಾಖೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸೇರ್ಪಡೆಯಾಗಿದ್ದಾರೆ. ಜೊತೆಗೆ ಶೀಘ್ರದಲ್ಲೇ ನಡೆಯುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.