ಬೆಂಗಳೂರು, ಆ.30(DaijiworldNews/TA):ಬೆಂಗಳೂರಿನ ಯಲಹಂಕದಲ್ಲಿ ಅತಿಶೀಘ್ರದಲ್ಲಿಯೇ ಸ್ಪೋರ್ಟ್ಸ್ ಸಿಟಿ ನಿರ್ಮಾಣ ಮಾಡಲಿದ್ದೇವೆ ಎಂದು ರಾಜ್ಯ ಗೃಹಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಕಂಠೀರವ ಕ್ರೀಡಾಂಗಣದ ಕೆಒಎ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಈ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಒಲಿಂಪಿಕ್ ಸಂಸ್ಥೆ(ಕೆಒಎ) ಹಾಗೂ ರಾಜ್ಯ ಕ್ರೀಡಾ ಇಲಾಖೆ ವತಿಯಿಂದ ಗುರುವಾರ ಕಂಠೀರವ ಕ್ರೀಡಾಂಗಣದ ಕೆಒಎ ಸಭಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಯೋಜನೆ ಮಾಡಿತ್ತು.
ಈ ವೇಳೆ ಮಾತನಾಡಿದ ಗೃಹಸಚಿವರು, ಬೆಂಗಳೂರು ದೇಶದಲ್ಲೇ ಐಟಿ ರಾಜಧಾನಿ ಎಂಬ ಖ್ಯಾತಿ ಗಳಿಸಿದೆ. ಕ್ರೀಡೆಯಲ್ಲೂ ನಮ್ಮ ರಾಜ್ಯ ವಿಶ್ವದಲ್ಲೇ ಗಮನಸೆಳೆಯಬೇಕು, ಕನ್ನಡಿಗರು ಪದಕ ಗೆದ್ದರೆ ಜಗತ್ತಿನಲ್ಲೇ ನಮ್ಮ ರಾಜ್ಯ ಖ್ಯಾತಿ ಗಳಿಸಲಿದೆ ಎಂಬುವುದಾಗಿ ಹೇಳಿದರು.