ಗದಗ, ಆ.15(DaijiworldNews/TA): ಮೈಸೂರು ದಸರಾ ಸಂಭ್ರಮಕ್ಕೆ ಈಗಾಗಲೇ ಸಜ್ಜಾಗುತ್ತಿದೆ. ಅಕ್ಟೋಬರ್ 3ರಂದು ಉದ್ಘಾಟನೆಗೊಳ್ಳಲಿರುವ ದಸರಾ ಗೆ ಒಬ್ಬರು ಮುಖ್ಯ ಅತಿಥಿ ಆಗಮಿಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಬಗ್ಗೆ ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ. ದೇಶದ ಒಬ್ಬ ಪ್ರಮುಖ ವ್ಯಕ್ತಿ ದಸರಾ ಅತಿಥಿಯಾಗಿ ಬರುತ್ತಾರೆ ಎಂದು ಅವರು ಹೇಳಿದ್ದಾರೆ.
ಈ ಬಾರಿ ಬಹಳ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು , ದೇಶದ ಪ್ರಮುಖ ವ್ಯಕ್ತಿ ಈ ದಸರಾ ಹಬ್ಬಕ್ಕೆ ಬರುತ್ತಾರೆ, ದಸರಾ ಉದ್ಘಾಟನೆಗೆ ಎರಡು-ಮೂರು ಹೆಸರು ಪ್ರಸ್ತಾಪವಾಗಿದೆ. ಉದ್ಘಾಟಕರ ಹೆಸರನ್ನು ಮುಖ್ಯಮಂತ್ರಿಗಳೇ ತಿಳಿಸುತ್ತಾರೆ ಎಂಬುವುದಾಗಿ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ಇದೀಗ ಹೆಚ್.ಕೆ.ಪಾಟೀಲ್ ದೇಶದ ಪ್ರಮುಖ ವ್ಯಕ್ತಿಯೊಬ್ಬರಿಂದ ದಸರಾ ಉದ್ಘಾಟನೆಗೊಳ್ಳಿದೆ ಎಂದಿರುವುದು ಸದ್ಯ ಕುತೂಹಲಕ್ಕೆ ಎಲ್ಲರ ಕಾರಣವಾಗಿದೆ.