ನವದೆಹಲಿ, ಆ.15(DaijiworldNews/TA) : ಸಂಘ ಪರಿವಾರವು ಬ್ರಿಟಿಷರ ಒಡೆದು ಆಳುವ ನೀತಿಯನ್ನು ತನ್ನ ಲಾಭಕ್ಕಾಗಿ ಪ್ರಚಾರ ಮಾಡುತ್ತಿದೆ, ಇಂದಿನ ಆಡಳಿತಗಾರರು ಒಡೆದು ಆಳುವ ಚಿಂತನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಕಾಂಗ್ರಸ್ ಅಧ್ಯಕ್ಷ ಮಲ್ಲಿಖಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
೭೮ನೇ ಸ್ವಾತಂತ್ಯ್ರೋತ್ಸವದ ಸುಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ ಆರ್ ಎಸ್ ಎಸ್ ವಿರುದ್ಧ ಮಾತಿನ ಚಾಟಿ ಏಟು ಬೀಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಲಕ್ಷಗಟ್ಟಲೆ ಜನರು ತ್ಯಾಗ- ಬಲಿದಾನ ಮಾಡಿದರು, ಪ್ರಯತ್ನವಿಲ್ಲದೆ ಸುಮ್ಮನೆ ಕುಳಿತು ಸ್ವಾತಂತ್ಯ್ರ ಲಭಿಸಲಿಲ್ಲ, ಕೆಲವರದ್ದು ಅಪಪ್ರಚಾರ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದವರು ಈಗ ಕಾಂಗ್ರೆಸ್ಗೆ ಸಲಹೆ ನೀಡುತ್ತಾರೆ ಮತ್ತು ಯಾವುದೇ ಕೊಡುಗೆಯಿಲ್ಲದೆ ಹುತಾತ್ಮರ ಪಟ್ಟಿಯಲ್ಲಿ ಸೇರಲು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಮುಂದುವರೆದು ಮಾತನಾಡಿ ಮೋದಿ ಸರ್ಕಾರದ ವಿರುದ್ಧವೂ ಕಿಡಿ ಕಾರಿದ್ದಾರೆ ಖರ್ಗೆ, ಮೋದಿ ಆಡಳಿತ ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದೆ, ಆದರೆ ಜನರು ಇನ್ನೂ ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದಿಂದ ನಲುಗುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.