ನವದೆಹಲಿ, ಆ.14(DaijiworldNews/AK): ದೇಶದ ಜನರಿಗೆ 78ನೇ ಸ್ವಾತಂ ತ್ರ್ಯ ದಿನದ ಶುಭಾಶಯ ತಿಳಿಸಿ ಸ್ವಾತಂತ್ರ್ಯ ನಮ್ಮ ಅತಿದೊಡ್ಡ ರಕ್ಷಣಾ ಕವಚವಾಗಿದೆ ಎಂದರು ಲೋಕಸಭೆ ವಿರೋ ಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಾತಂತ್ರ್ಯ ಎಂದರೆ ಕೇ ವಲ ಒಂದು ಪದವಲ್ಲ , ಸಾಂವಿಧಾನಿಕ ಮತ್ತು
ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಅತಿದೊಡ್ಡ ರಕ್ಷಣಾ ಕವಚ ಎಂದು ಹೇಳಿದರು.
ಸ್ವಾತಂತ್ರ್ಯ ಎನ್ನುವುದು ಅಭಿವ್ಯಕ್ತಿಯ ಶಕ್ತಿಯಾಗಿದ್ದು, ಸತ್ಯವನ್ನು ಮಾತನಾಡುವ ಸಾಮರ್ಥ್ಯ ಮತ್ತು ಕನಸುಗಳನ್ನು ನನಸಾಗಿಸುವ ಭರವಸೆಯಾಗಿದೆ ಎಂದು ನುಡಿದರು.
ಇಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋ ತ್ಸದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ಆ ಮೂಲಕ ದಶಕದ ಬಳಿಕ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷದ ಮೊದಲ ನಾಯಕರಾಗಿದ್ದಾರೆ