ಕಲಬುರಗಿ, ಆ.14(DaijiworldNews/AA): ಬಡಜನರಿಗೆ ಅನುಕೂಲ ಆಗಲಿ ಎಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡುತ್ತಿಲ್ಲ. ಸುಮ್ಮನೇ ಎಲ್ಲದಕ್ಕೂ ಆರೋಪ ಮಾಡಿದ್ರೆ ಹೇಗೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಕೊಡಬೇಕು. ಸ್ಟಾಕ್ ಇಲ್ಲದಿದ್ದರೂ ತರಿಸಿಕೊಡಬೇಕು. ಹೀಗಾಗಿ ನಾವು ಜನೌಷಧಿ ಕೇಂದ್ರ ಬೇಡ ಎಂದು ಹೇಳುತ್ತಿದ್ದೇವೆ. ಹಳೇ ಪಿಎಂ ಜನೌಷಧಿ ಕೇಂದ್ರಗಳನ್ನು ರಿನಿವಲ್ ಮಾಡುವುದಿಲ್ಲ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯೋದು ಬಿಡಬೇಕು ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಯಾವುದೇ ಮೆಡಿಕಲ್ ಶಾಪ್ ಇರಬಾರದು. ಮೆಡಿಕಲ್ ಶಾಪ್ ಇದ್ದರೆ ಬಡವರಿಗೆ ತೊಂದರೆ ಆಗುತ್ತೆ. ಅನಾವಶ್ಯಕ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾಗುತ್ತೆ. ನಾವೇ ಉಚಿತವಾಗಿ ಔಷಧಿ ಕೊಡುತ್ತೇವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ನೀಡಬೇಕು. ಸ್ಟಾಕ್ ಇಲ್ಲ ಅಂದರೂ ತರಿಸಿಕೊಡಬೇಕು. ಹೀಗಾಗಿ ನಾವು ಜನ ಔಷಧಿ ಕೇಂದ್ರ ಬೇಡ ಎನ್ನುತ್ತಿದ್ದೇವೆ. ಸದ್ಯ ಇರೋ ಮೆಡಿಕಲ್ ಶಾಪ್ಗಳ ಅವಧಿ ಮುಗಿದ ಮೇಲೆ ರಿನಿವಲ್ ಮಾಡೋದಿಲ್ಲ ಎಂದರು.