ಬೆಂಗಳೂರು, ಆ.13 (DaijiworldNews/TA) : ಡಿಸಿಎಂ ಡಿಕೆಶಿವಕುಮಾರ್ ರಾಹುಲ್ ಗಾಂಧಿಯವರ ಮತ್ತೊಮ್ಮೆ ಇಡಿ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿ, ಇಂತಹುದ್ದನ್ನೆಲ್ಲ ಅವರು ನೋಡಿದ್ದಾರೆ , ಯಾವುದೇ ವಿಚಾರಣೆಗೂ ನಮ್ಮ ನಾಯಕ ಹೆದರುವುದಿಲ್ಲ ಎಂದು ತನ್ನ ನಾಯಕನ ಬಗ್ಗೆ ಹೇಳಿಕೆ ನೀಡಿದ್ದಾರೆ.
ದಿಢೀರ್ ದೆಹಲಿಗೆ ಹೊರಟು ನಿಂತ ಡಿಸಿಎಂ ಡಿಕೆಶಿ, ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ದೆಹಲಿ ಭೇಟಿಯ ಕಾರಣ ತಿಳಿಸದೆ ಇತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಸಿಪಿ ಯೋಗೇಶ್ವರ್ ಚನ್ನಪಟ್ಟಣದಿಂದ ಟಿಕೆಟ್ ಸಿಗದೇ ಹೋದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಏನು ತೀರ್ಮಾನ ಮಾಡುತ್ತಾರೆ ಅಂತ ಈಗಲೇ ಹೇಗೆ ಹೇಳಲು ಸಾಧ್ಯ? ಮೊದಲೆಲ್ಲ ಹಾಗೆ ಹೇಳುತ್ತಾರೆ, ಅದರೆ ಈಡಿ, ಸಿಬಿಐ ಅಂತ ಹೆದರಿಸಿದಾಕ್ಷಣ ಬಾಲ ಮುದುರಿಕೊಂಡು ಮನೆ ಸೇರುತ್ತಾರೆ ಎಂಬುವುದಾಗಿ ವ್ಯಂಗ್ಯವಾಡಿದರು.