ಬಿಹಾರ, ಆ.11(DaijiworldNews/AA): ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುವುದು ಅನೇಕರ ಪಾಲಿನ ಕನಸಾಗಿರುತ್ತದೆ. ಆದರೆ ಕೆಲವರು ಮಾತ್ರ ಈ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಹೀಗೆ ಮದುವೆಯಾದ ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿದ ತನು ಶ್ರೀ ಅವರ ಯಶೋಗಾಥೆ ಇದು.
ತನು ಶ್ರೀ ಅವರ ತಂದೆ ಸುಬೋಧ್ ಕುಮಾರ್ ಮತ್ತು ತಾಯಿ ನೀಲಂ ಪ್ರಸಾದ್. ಅವರ ತಂದೆ ಮಾಜಿ ಡಿಐಜಿ. ತನುಶ್ರೀ ಅವರಿಗೆ ಆಕೆಯ ತಂದೆಯೇ ಸ್ಫೂರ್ತಿ.
ತನು ಶ್ರೀ ಅವರು ಬಿಹಾರದ ಮೋತಿಹಾರಿ ಪ್ರದೇಶದಲ್ಲಿ ತನ್ನ ಶಿಕ್ಷಣವನ್ನು ಪ್ರಾರಂಭಿಸಿದರು. ಆದರೆ ಅವರ ತಂದೆಗೆ ವರ್ಗಾವಣೆಯಾಗುತ್ತಿದ್ದ ಕಾರಣ ಬೇರೆ ಬೇರೆ ಸಂಸ್ಥೆಗಳ್ಲಿಯೂ ತನ್ನ ಶಿಕ್ಷಣವನ್ನು ಪಡೆದುಕೊಂಡರು. ಅವಳು ಬೊಕಾರೋನ ಡಿಎಡಬ್ಲೂ ಪಬ್ಲಿಕ್ ಸ್ಕೂಲ್ ನಲ್ಲಿ ತನ ಪದವಿ ಪೂರ್ವ ಶಿಕ್ಷಣವನ್ನು ಪಡೆಯುತ್ತಾರೆ. ನಂತರ ಅವಳು ಯುಪಿಎಸ್ಸಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡಲು ದೆಹಲಿಗೆ ತೆರಳಿದರು.
ತನು ಶ್ರೀ ಅವರಿಗೆ ಅವರ ಸಹೋದರಿ ಮನು ಶ್ರೀ ಅವರು ಸ್ಫೂರ್ತಿ ಮತ್ತು ಬೆಂಬಲವನ್ನು ನೀಡಿತ್ತಾರೆ. ಇದರೊಂದಿಗೆ ತನುಶ್ರೀ ಅವರ ಸ್ವಯಂ ಅಧ್ಯಯನವನ್ನು ಮಾಡುತ್ತಿರುತ್ತಾರೆ. ತನು ಶ್ರೀ ಅವರು 2015 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮದುವೆಯಾದ ಬಳಿಕವೂ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿಯನ್ನು ಮುಂದುವರೆಸುತ್ತಾರೆ.
2016 ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗುತ್ತಾರೆ. ಪ್ರಸ್ತುತ ತನು ಶ್ರೀ ಅವರು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಎಸ್ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.