ಮೈಸೂರು,ಆ.08(DaijiworldNews/AK): ಬಿಜೆಪಿ-ಜೆಡಿಎಸ್ನವರು ಸುಳ್ಳುಗಳನ್ನು ಹೇ ಳಿ ಇಲ್ಲಸಲ್ಲದ್ದನ್ನು ಬಿಂಬಿಸುತ್ತಿದ್ದಾರೆ ಎಂದು ನೋವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು. ಅವರ ಪರವಾಗಿ ಬಂಡೆಯಾಗಿ ನಿಲ್ಲುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ವೇದಿಕೆಯನ್ನು ಗುರುವಾರ ಪರಿಶೀಲಿಸಿದ ನಂತರ ಅವರು ಮಾತನಾಡಿ, ಸಿದ್ದರಾಮಯ್ಯ ಭಾವನಾತ್ಮಕ ಜೀವಿ. 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಒಬ್ಬ ಹಿಂದುಳಿದ ವರ್ಗದ ನಾಯಕನ ತೇಜೋವಧೆಗೆ ಬಿಜೆಪಿ-ಜೆಡಿಎಸ್ ಹೊರಟಿರುವುದರಿಂದಾಗಿ ಇಡೀ ಸರ್ಕಾರ ಹಾಗೂ ಮಲ್ಲಿಕಾರ್ಜುನ ಖರ್ಗೆ ನೇತೃತ್ವ ಮತ್ತು ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಇಡೀ ಪಕ್ಷ ಸಿದ್ದರಾಮಯ್ಯ ಪರವಾಗಿ ನಿಂತಿದ್ದೇವೆ ಎಂದರು.
ಕೆಪಿಸಿಸಿ ಅಧ್ಯಕ್ಷನಾಗಿ ಬಂಡೆಯೋ , ಬಲವೋ ಅಥವಾ ತೋಳಾಗಿಯೋ ಮುಖ್ಯಮಂತ್ರಿ ಪರವಾಗಿದ್ದೇನೆ ಮುಂದೆಯೂ ಇರುತ್ತೇನೆ ಎಂದು ಹೇಳಿದರು.ಭ್ರಷ್ಟಾಚಾರಿಗಳಾದ ಬಿಜೆಪಿ-ಜೆಡಿಎಸ್ನವರು ಅವರ ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಪಾಪದ ಪಾದಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಲು,ಪ್ರಶ್ನೆಗಳನ್ನು ಕೇಳಲು ನಾವು ಜನಾಂದೋಲನ ಸಮಾವೇ ಶ ಹಮ್ಮಿಕೊಂಡಿದ್ದೇ ವೆ. ಬಿಜೆಪಿ ಸರ್ಕಾ ರದಲ್ಲಿ 25 ಹಗರಣಗಳು, ಕುಮಾರಸ್ವಾಮಿ ಕುಟುಂಬದ ಹಗರಣಗಳಿಗೆ ಸಂಬಂಧಪಟ್ಟಂತೆ ಉತ್ತರವನ್ನು ಕೊಡಲಾಗುವುದು ಎಂದು ಹೇಳಿದರು.