ಪಶ್ಚಿಮ ಬಂಗಾಲ, ಆ.06(DaijiworldNews/AK): ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈಕೆ ಮೊದಲ ಪ್ರಯತ್ನದಲ್ಲೇ ದೇಶದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ ಐಎಎಸ್ ಆಗಿದ್ದಾರೆ. ಅವರ ಕಥೆ ಇಲ್ಲಿದೆ.
ಐಎಎಸ್ ಅಲಂಕೃತಾ ಪಾಂಡೆ 2015 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾದರು. ಅವರು ಅಖಿಲ ಭಾರತ 85 ನೇ ರ್ಯಾಂಕ್ ಪಡೆದಿದ್ದಾರೆ. 2016 ರ ಬ್ಯಾಚ್ ಐಎಎಸ್ ಅಧಿಕಾರಿಗೆ ಆರಂಭದಲ್ಲಿ ಪಶ್ಚಿಮ ಬಂಗಾ ಕೇಡರ್ ಅನ್ನು ನೀಡಲಾಯಿತು. ಆದರೆ ಐಎಎಸ್ ಅನ್ಶುಲ್ ಅಗರ್ವಾಲ್ ಅವರನ್ನು ಮದುವೆಯಾದ ನಂತರ, ಅವರನ್ನು ಅಂತರ-ಕೇಡರ್ ವರ್ಗಾವಣೆಯಲ್ಲಿ ಬಿಹಾರಕ್ಕೆ ಕಳುಹಿಸಲಾಯಿತು.
ಐಎಎಸ್ ಅಲಂಕೃತಾ ಉತ್ತರ ಪ್ರದೇಶದ ಕಾನ್ಪುರ ನಿವಾಸಿ. ಅವರ ಯುಪಿಎಸ್ ಸಿ ಪಯಣ ಸುಲಭವಾಗಿರಲಿಲ್ಲ. ಅವರು 2014 ರ ಮೇ ತಿಂಗಳಲ್ಲಿ upsc ಪರೀಕ್ಷೆಗೆ ತಯಾರಿ ಮಾಡಲು ನಿರ್ಧರಿಸಿದರು. ಆದರೆ ವರ್ಷದ ಮಧ್ಯದಲ್ಲಿ ಆಕೆ ಖಿನ್ನತೆಗೆ ಒಳಗಾದರು.
ಖಿನ್ನತೆಯಿಂದ ಚೇತರಿಸಿಕೊಂಡ ಅಲಂಕೃತಾ 2015 ರಲ್ಲಿ ಮೊದಲ ಬಾರಿಗೆ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ನೀಡಿದರು. ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಯಶಸ್ವಿಯಾಗಿದರು.ಅಲಂಕೃತಾ ಪ್ರತಿದಿನ ಎಂಟು ಗಂಟೆಗಳ ಕಾಲ ಓದುತ್ತಿದ್ದರು. UPSC ಪರೀಕ್ಷೆಗೂ ಮುನ್ನ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲಂಕೃತಾ ಎಂಎನ್ ಎನ್ಐಟಿ ಅಲಹಾಬಾದ್ ನಿಂದ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ.
ಅಲಂಕೃತಾ ಅವರು ತಮ್ಮ ದಿನವನ್ನು ಬೆಳಿಗ್ಗೆ 6 ಗಂಟೆಗೆ ಪ್ರಾರಂಭಿಸುತ್ತಿದ್ದರಂತೆಯೋಗ ಮತ್ತು ಜಾಗಿಂಗ್ ನಂತರ ಓದಲು ಕುಳಿತುಕೊಳ್ಳುತ್ತಿದ್ದರು. ಆಕೆಗೆ ಯಾವುದೇ ಸಮಸ್ಯೆ ಬಂದಾಗ ಐಎಎಸ್ ಪರೀಕ್ಷಾ ತಯಾರಿ ಏಕೆ ತಯಾರಿ ಪ್ರಾರಂಭಿಸಿದೆ ಎಂದು ಕಾಗದದ ಮೇಲೆ ಬರೆಯುತ್ತಿದ್ದರಂತೆ. ಇದು ಅವರ ಗುರಿಯಲ್ಲಿ ಸ್ಪಷ್ಟತೆಯನ್ನು ನೀಡಿತು.