ನವದೆಹಲಿ, ಆ.04(DaijiworldNews/AA): ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಯನಾಡಿನ ಭೂಕುಸಿತದ ಕುರಿತಾದ ವಿಡಿಯೊ ಪೋಸ್ಟ್ ಮಾಡಿದ್ದು, 'ವಯನಾಡಿನಲ್ಲಿ ಸ್ಮರಣೀಯ ದಿನದ ಕೆಲವು ನೆನಪುಗಳು' ಎಮಬ ಅಡಿಬರಹ ನೀಡಿದ್ದಾರೆ. ಇದೀಗ ಈ ಪೋಸ್ಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಶಶಿ ತರೂರ್ ಅವರು ತಮ್ಮ ಪೋಸ್ಟ್ ನಲ್ಲಿ ಸ್ಮರಣೀಯ ಎಂಬ ಪದ ಬಳಕೆ ಮಾಡಿದ್ದಾರೆ. ಈ ಸ್ಮರಣೀಯ ಪದ ಬಳಕೆ ಕುರಿತಂತೆ ಹಲವು ಮಂದಿ ತರೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ವಿನಾಶ ಮತ್ತು ಸಾವು ಶಶಿ ತರೂರ್ ಅವರಿಗೆ ಸ್ಮರಣೀಯ' ಎಂದು ಎಕ್ಸ್ ಬಳಕೆದಾರರೊಬ್ಬರು ಶಶಿ ತರೂರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ತಮ್ಮ ಪೋಸ್ಟ್ ಕುರಿತಾದ ಟೀಕೆಗಳಿಗೆ ತಿರುಗೇಟು ನೀಡಿರುವ ತರೂರ್, 'ಸ್ಮರಣೀಯ' ಪದದ ಅರ್ಥವೆಂದರೆ ಯಾವುದೋ ಒಂದು ನೆನಪಿನಲ್ಲಿ ಉಳಿಯಬಹುದಾದಂತಹ ಘಟನೆ ಅಥವಾ ಸದಾ ನೆನಪಿನಲ್ಲಿರಬಹುದಾದದ್ದು. ಏಕೆಂದರೆ, ಅದು ವಿಶೇಷ ಅಥವಾ ಮರೆಯಲಾಗದ್ದು. ಅಷ್ಟೇ ನನ್ನ ಪೋಸ್ಟ್ನ ಅರ್ಥ' ಎಂದು ಹೇಳಿದ್ದಾರೆ.