ದೆಹಲಿ, ಜು.28(DaijiworldNews/AA): ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲದಿಂದ ಇಂಜಿನಿಯರಿಂಗ್ ವೃತ್ತಿ ತೊರೆದು, ತನ್ನ ಕನಸನ್ನು ನನಸಾಗಿಸಿಕೊಂಡ ಐಎಎಸ್ ಅಧಿಕಾರಿ ವಿಶಾಖಾ ಅವರ ಯಶೋಗಾಥೆ ಇದು.
ವಿಶಾಖಾ ಅವರು ಮೂಲತಃ ದೆಹಲಿಯವರು. ಅವರ ತಂದೆ ರಾಜ್ಕುಮಾರ್ ಯಾದವ್ ಹಾಗೂ ತಾಯಿ ಸರಿತಾ ಯಾದವ್. ವಿಶಾಖಾ ಅವರ ತಂದೆ ಸಹಾಯಕ ಸಬ್ ಇನ್ಸ್ಪೆಕ್ಟರ್.
ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಓದಿದರು. ಅವರು ಇಂಜಿನಿಯರಿಂಗ್ ಮುಗಿಸಿದ ಬಳಿಕ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾರೆ. ಆದರೆ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲ ಸ್ಥಿರವಾಗಿತ್ತು. ಉತ್ತಮವಾದ ಕೆಲಸವನ್ನು ಅವರು ಹೊಂದಿದ್ದರು ಕೂಡ, ತನ್ನ ಕನಸನ್ನು ನನಸಾಗಿಸಿಕೊಳ್ಳಲು ತನ್ನ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ.
ರಾಜೀನಾಮೆ ನೀಡಿದ ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಾರೆ. ಎರಡು ವಿಫಲ ಪ್ರಯತ್ನಗಳ ನಂತರ, ವಿಶಾಖಾ ಅಂತಿಮವಾಗಿ 2019 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ವಿಶಾಖಾ ಅವರು 6ನೇ ರ್ಯಾಂಕ್ ಪಡೆದು ಮೂರನೇ ಬಾರಿಗೆ ತೇರ್ಗಡೆಯಾಗುತ್ತಾರೆ.
ಈ ಮೂಲಕ ಐಎಎಸ್ ಅಧಿಕಾರಿಯಾಗಬೇಕೆಂಬ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಇನ್ನು ವಿಶಾಖಾ ಅವರಿಗೆ ತಮ್ಮ ಗುರಿಯನ್ನು ಸಾಧಿಸಲು ಆಕೆಯ ತಂದೆ ಹಾಗೂ ತಾಯಿ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ.