ಉತ್ತರ ಪ್ರದೇಶ, ಜು 24(DaijiworldNews/ AK): ವಿದೇಶದಲ್ಲಿನ ಕೆಲಸ ಬಿಟ್ಟು ಸರ್ಕಾರಿ ಅಧಿಕಾರಿಯಾದ ಅಪೂರ್ವ ಯಾದವ್ ಕಥೆ.
ಇವರು ಉತ್ತರ ಪ್ರದೇಶದ ಮೈನ್ಪುರಿ ನಿವಾಸಿ. ಈ ಗ್ರಾಮದಲ್ಲಿ ಇಂಜಿನಿಯರ್ ಆದ ಮೊದಲ ವ್ಯಕ್ತಿ ಅಪೂರ್ವ.ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಎಲ್ಲರೂ ಯಶಸ್ವಿಯಾಗುವುದಿಲ್ಲ. ಇದಕ್ಕಾಗಿ ಕೆಲವರು ಕಷ್ಟಪಡಬೇಕಾಗುತ್ತದೆ. ಉತ್ತರ ಪ್ರದೇಶದ ಮೈನ್ ಪುರಿ ಎಂಬ ಸಣ್ಣ ಪಟ್ಟಣದ ನಿವಾಸಿ ಅಪೂರ್ವ ಯಾದವ್ ಯುಪಿ ಪಿಸಿಎಸ್ ಪರೀಕ್ಷೆಯಲ್ಲಿ ಮೂರು ಬಾರಿ ಅನುತ್ತೀರ್ಣರಾಗಿದ್ದರು. ಆದರೆ ಛಲ ಬಿಡದೆ ನಾಲ್ಕನೇ ಪ್ರಯತ್ನದಲ್ಲಿ ಎಸ್ ಡಿಎಂ ಆಗಿ ಯಶಸ್ಸಿಯಾಗಿದ್ದಾರ
ಅಪೂರ್ವ ಯಾದವ್ ಅವರ ಶಾಲಾ ಶಿಕ್ಷಣವನ್ನು ಹಿಂದಿ ಮಾಧ್ಯಮದಲ್ಲಿ ಮಾಡಿದ್ದಾರೆ. ಆದರೆ ಇಂಜಿನಿಯರಿಂಗ್ ಪದವಿ ಪಡೆಯಲು ಇಂಗ್ಲಿಷಿನಲ್ಲಿ ಪರಿಣಿತರಾಗುವುದು ಅವರಿಗೆ ಅನಿವಾರ್ಯವಾಗಿತ್ತು. ಕಷ್ಟಪಟ್ಟು ಇಂಜಿನಿಯರಿಂಗ್ ಮುಗಿಸಿದ್ದಲ್ಲದೆ, ಟಿಸಿಎಸ್ ನಲ್ಲಿ ಕೆಲಸವನ್ನೂ ಪಡೆದರು. ಟಿಸಿಎಸ್ ನಂತಹ ಬಹುರಾಷ್ಟ್ರೀಯ ಕಂಪನಿಯಲ್ಲಿ ಮೂರು ವರ್ಷ ಕೆಲಸ ಮಾಡಿದ ನಂತರ ಅಮೆರಿಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಅದೇ ಸಮಯದಲ್ಲಿ ಅವರ ಮನಸ್ಸಿನಲ್ಲಿ ಐಎಎಸ್ ಅಧಿಕಾರಿ ಆಗುವ ಆಲೋಚನೆ ಬಂತು.ಆಗ ಅಪೂರ್ವ ಅವರು ಪರೀಕ್ಷೆಗಾಗಿ ತಯಾರಿ ನಡೆಸಿದರು.
ಮೂರು ಬಾರಿ ವಿಫಲವಾದ ನಂತರ, ಅವರು ಅಂತಿಮವಾಗಿ 2016 ರಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಇದರಲ್ಲಿ 13ನೇ ರ್ಯಾಂಕ್ ಪಡೆಯುವ ಮೂಲಕ ಅವರು ತಮ್ಮ ನಗರದ ಮೊದಲ ಮಹಿಳಾ ಎಸ್ ಡಿಎಂ ಆದರು.
ಅಪೂರ್ವ ಯೂಟ್ಯೂಬ್ ನಲ್ಲಿ ಚಾನೆಲ್ ಕೂಡ ಹೊಂದಿದ್ದಾರೆ. ಇದು ಮಾತ್ರವಲ್ಲದೆ ಅಪೂರ್ವ ಯಾದವ್ ಮತ್ತು ವಿಶಾಲ್ ತ್ಯಾಗಿ ಇನ್ ಸ್ಟಾಗ್ರಾಮ್ ನಲ್ಲಿ ವಿಪೂರ್ವ ಎಂಬ ಹೆಸರಿನ ಜೋಡಿ ಖಾತೆಯನ್ನು ಸಹ ಹೊಂದಿದ್ದಾರೆ.