ಉತ್ತರಪ್ರದೇಶ, ಜು 20(DaijiworldNews/AK): ಐಎಎಸ್ ಅಧಿಕಾರಿ ಸ್ವಧಾ ದೇವ್ ಸಿಂಗ್. ಇತ್ತೀಚಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸನ್ಮಾನಿಸಲ್ಪಟ್ಟ ಸಮರ್ಥ ಮಹಿಳಾ ಐಎಎಸ್ ಅಧಿಕಾರಿಯ ಬಗ್ಗೆ ಇಂದು ತಿಳಿಯೋಣ.
ಸ್ವಧಾ ದೇವ್ ಸಿಂಗ್ ಉತ್ತರ ಪ್ರದೇಶದ ವಾರಣಾಸಿ ನಿವಾಸಿ. ಒಡಿಶಾ ಕೇಡರ್ ಐಎಎಸ್ ಅಧಿಕಾರಿ. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಬನಾರಸ್ ನಲ್ಲಿ ಪೂರೈಸಿದ್ದಾರೆ. ನಂತರ ಅವರು ಹೆಚ್ಚಿನ ಓದಿಗಾಗಿ ದೆಹಲಿಗೆ ಬಂದರು. ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜು ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಪದವಿ ಪಡೆದರು. ಸ್ವಧಾ ಅವರು ಅಧ್ಯಯನದಲ್ಲಿ ಚುರುಕಾಗಿದ್ದರು, ಇದರಿಂದಾಗಿ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರು 2014 ರಲ್ಲಿ ಈ ಪರೀಕ್ಷೆಯಲ್ಲಿ ಅಖಿಲ ಭಾರತ 66ನೇ ರ್ಯಾಂಕ್ ಪಡೆದು ಐಎಎಸ್ ಆದರು.
ಸ್ವಧಾ ಪ್ರಸ್ತುತ ಒರಿಸ್ಸಾದ ರಾಯಗಢ ಜಿಲ್ಲೆಯ ಕಲೆಕ್ಟರ್ ಆಗಿದ್ದಾರೆ, ಅವರ ಪತಿ ಕೂಡ ಐಎಎಸ್ ಅಧಿಕಾರಿಯಾಗಿದ್ದಾರೆ. ಪುರಿ ಕಲೆಕ್ಟರ್ ಐಎಎಸ್ ಸಮರ್ಥ್ ವರ್ಮಾ ಅವರನ್ನು ವಿವಾಹವಾಗಿದ್ದಾರೆ. ಇದು ಅವರ ಎರಡನೇ ವಿವಾಹ. ಇದಕ್ಕೂ ಮೊದಲು ಸ್ವಧಾ ಅವರು ಬೋಲಂಗಿರ್ ಕಲೆಕ್ಟರ್ ಚಂಚಲ್ ರಾಣಾ ಅವರನ್ನು ವಿವಾಹವಾಗಿದ್ದರು. ಆದರೆ ನಂತರ ಇಬ್ಬರೂ ಬೇರೆಯಾದರೂ.
ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಂದ ಭೂಮಿ ಸಮ್ಮಾನ್ 2023 ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಆಧುನೀಕರಣ ಕಾರ್ಯಕ್ರಮದ ಅಡಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣದಲ್ಲಿ ಸ್ವಧಾ ದೇವ್ ಸಿಂಗ್ ಅವರ ಅತ್ಯುತ್ತಮ ಸಾಧನೆಗಾಗಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.