ಶ್ರೀನಗರ, ಜು. 19(DaijiworldNews/AA): ಇತ್ತೀಚೆಗೆ ಜಮ್ಮುವಿನ ದೋಡಾದಲ್ಲಿ ನಡೆದ ದಾಳಿಯ ಬಳಿಕದ ಘಟನೆಗಳನ್ನು ತೋರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಪಾಕಿಸ್ತಾನ ಮೂಲದವರು ಎನ್ನಲಾದ ಭಯೋತ್ಪಾದಕರು ಮೃತ ಸೈನಿಕನ ಶಿರಚ್ಛೇದ ಮಾಡಲು ಯತ್ನಿಸುತ್ತಿರುವುದನ್ನು ಕಂಡು ಬಂದಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ನ 'ಕಾಶ್ಮೀರ ಟೈಗರ್ಸ್' ಇತ್ತೀಚೆಗೆ ಜಮ್ಮುವಿನ ದೋಡಾದಲ್ಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸೇನಾಧಿಕಾರಿ ಮತ್ತು ಇತರ ಮೂವರು ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಯ ಬಳಿಕದ ಘಟನೆಯ ವಿಡಿಯೋದಲ್ಲಿ ಭಯೋತ್ಪಾದಕರು ಮೃತ ಸೈನಿಕನ ಶಿರಚ್ಛೇದ ಮಾಡಲು ಯತ್ನಿಸುತ್ತಿರುವುದು ಕಂಡುಬಂದಿದೆ. ಜೊತೆಗೆ ಈ ವಿಡಿಯೋದಲ್ಲಿ 'ಕೆಲವು ದಿನಗಳ ಹಿಂದೆ ನಡೆದ ಎನ್ಕೌಂಟರ್ನಲ್ಲಿ ಮೃತ ಭಯೋತ್ಪಾದಕನ ದೇಹವನ್ನು ಸೈನಿಕರು ಎಳೆದೊಯ್ದಿದ್ದಕ್ಕೆ ಪ್ರತಿಕಾರವಾಗಿ ಈ ಕೃತ್ಯ ಎಸಗಲಾಗಿದೆ' ಎಂದು ಭಯೋತ್ಪಾದಕರ ಗುಂಪು ತಿಳಿಸಿದೆ.
ಇನ್ನು ಜೊತೆಗೆ ಘಟನೆಯ ಸಮಯದಲ್ಲಿ ಸೈನಿಕರಿಂದ ನಾವು ಶಸ್ತಾçಸ್ತçಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಭಯೋತ್ಪಾದಕರು ಹೇಳಿದ್ದಾರೆ. ಅದರಂತೆ ಭಯೋತ್ಪಾದಕರು ಹಂಚಿಕೊಂಡಿರುವ ವಿಡಿಯೋದಲ್ಲಿ ಎಕೆ - 47 ಅನ್ನು ಕೂಡ ವಿಡಿಯೊದಲ್ಲಿ ಕಂಡು ಬಂದಿದೆ ಎಂದು ಹೇಳಲಾಗಿದೆ. ಇನ್ನು ಈ ವಿಡಿಯೋವನ್ನು ಸೇನಾ ಮೂಲಗಳು ಪರಿಶೀಲಿಸುತ್ತಿವೆ.