ಹರಿಯಾಣ, ಜು. 18(DaijiworldNews/AK):ಕಠಿಣ ಪರಿಶ್ರಮದ ಮೂಲಕ ದೇಶದ ಕಠಿಣ ಪರೀಕ್ಷೆಯಾದ ಯುಪಿಎಸ್ ಸಿಯಲ್ಲಿ ಯಶಸ್ವಿಯಾಗುವ ಮೂಲಕ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿ.
ಮಧುಮಿತಾ ಹರಿಯಾಣದ ಪಾಣಿಪತ್ ನಿವಾಸಿ. ಅವರು 2019 ರ UPSC ಪರೀಕ್ಷೆಯಲ್ಲಿ 86 ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಆಗಿದ್ದಾರೆ. ಮಧುಮಿತಾ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು.2010 ರಲ್ಲಿ 10ನೇ ಕ್ಲಾಸ್ ಬೋರ್ಡ್ ಪರೀಕ್ಷೆಯಲ್ಲಿ ಸಮಲ್ಖಾದ ಮಹಾರಾಣಾ ಪ್ರತಾಪ್ ಪಬ್ಲಿಕ್ ಸ್ಕೂಲ್ ಗೆ ಅಗ್ರಸ್ಥಾನ ಪಡೆದರು.
ನಂತರ 2012ರಲ್ಲಿ 12ನೇ ತರಗತಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಇದರ ನಂತರ ಅವರು PIET ಸಮಲ್ಖಾದಿಂದ BBA ಮಾಡಿದರು. ಇದರಲ್ಲಿ ಅವರು ವಿಶ್ವವಿದ್ಯಾಲಯದ ಟಾಪರ್ ಆಗಿದ್ದರು.ಮಧುಮಿತಾ ಅವರ ತಂದೆ ಮಹಾವೀರ್ ಸಿಂಗ್ ಹರಿಯಾಣ ಕೃಷಿ ಮಾರುಕಟ್ಟೆ ಮಂಡಳಿಯಲ್ಲಿ ಹರಾಜು ರೆಕಾರ್ಡರ್ ಆಗಿದ್ದಾರೆ. ಅವರ ತಾಯಿ ದರ್ಶನಾ ದೇವಿ ಗೃಹಿಣಿ. ಮಧುಮಿತಾ ಅವರಿಗೆ ಇಬ್ಬರು ಸಹೋದರರಿದ್ದಾರೆ.
ಮಧುಮಿತಾಳ ತಂದೆಗೆ ಮೊದಲಿನಿಂದಲೂ ಮಗಳ ಮೇಲೆ ಅಪಾರ ನಂಬಿಕೆ. ಮಧುಮಿತಾ ಸರ್ಕಾರಿ ಅಧಿಕಾರಿ ಆಗಬೇಕೆಂದು ಅವರು ಬಯಸಿದ್ದರು .ಮಧುಮಿತಾಳ ಓದು ಮುಗಿದ ಕೂಡಲೇ ಮದುವೆ ಮಾಡಿಸುವಂತೆ ಸಂಬಂಧಿಕರು ಆಕೆಯ ತಂದೆಗೆ ಆಗಾಗ ಸಲಹೆ ನೀಡುತ್ತಿದ್ದರು. ಆದರೆ ಆಕೆಯ ತಂದೆ ಮಧುಮಿತಾಗೆ ಮೊದಲು ಕೆಲಸ ಮಾಡಲಿ ಎಂದು ಬಯಸಿದ್ದರು. ನಂತರವೇ ಆಕೆಗೆ ಮದುವೆ ಮಾಡುತ್ತೇನೆ ಎಂದು ಹೇಳುವ ಮೂಲಕ ಮಗಳ ಬೆಂಬಲಕ್ಕೆ ನಿಂತಿದ್ದರು.
ಮಧುಮಿತಾ 2017 ರಲ್ಲಿ UPSC ಪರೀಕ್ಷೆಯ ಮೊದಲ ಪ್ರಯತ್ನವನ್ನು ನೀಡಿದರು. ಇದರಲ್ಲಿ ಅವರು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ನಂತರ 2018ರಲ್ಲಿ ಮೇನ್ಸ್ ನಲ್ಲಿ ಅನುತ್ತೀರ್ಣಳಾದರು. ಇದರ ನಂತರ, ಅಂತಿಮವಾಗಿ 2019 ರಲ್ಲಿ ಅವರು 86 ನೇ ರ್ಯಾಂಕ್ ನೊಂದಿಗೆ ಯಶಸ್ವಿಯಾದರು.