ಉತ್ತರ ಪ್ರದೇಶ, ಜು. 14(DaijiworldNews/AA): ಕೇವಲ ಒಂದು ವರ್ಷದ ತಯಾರಿಯೊಂದಿಗೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭದ ಸಾಧನೆಯಲ್ಲ. ಹೀಗೆ ಕೇವಲ ಒಂದೇ ಒಂದು ವರ್ಷ ಯುಪಿಎಸ್ಸಿಗೆ ತಯಾರಿ ನಡೆಸಿ 22ನೇ ವಯಸ್ಸಿಗೆ ಐಎಎಸ್ ಅಧಿಕಾರಿ ಅನನ್ಯಾ ಸಿಂಗ್ ಅವರ ಯಶೋಗಾಥೆ ಇದು.
ಅನನ್ಯಾ ಸಿಂಗ್ ಅವರು ಉತ್ತರ ಪ್ರದೇಶದ ಪ್ರಯಾಗ್ರಾಜ್ ಮೂಲದವಳು. ಪ್ರಯಾಗರಾಜ್ನ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ, ಅನನ್ಯಾ ಸಿಂಗ್ ತನ್ನ ಆರಂಭಿಕ ಶಾಲಾ ಶಿಕ್ಷಣವನ್ನು ಮುಗಿಸಿದಳು. ಬೋರ್ಡ್ ಪರೀಕ್ಷೆಯಲ್ಲಿ, ಅವರು ಹತ್ತನೇ ತರಗತಿಯಲ್ಲಿ 96% ಮತ್ತು ಹನ್ನೆರಡನೇ ತರಗತಿಯಲ್ಲಿ 98.55% ಅಂಕಗಳನ್ನು ಪಡೆದಿದ್ದರು. ತನ್ನ 12 ನೇ ತರಗತಿಯ ನಂತರ, ಅನನ್ಯಾ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು.
ಚಿಕ್ಕಂದಿನಿಂದಲೂ ಅನನ್ಯಾ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲವಿತ್ತು. ಹೀಗಾಗಿ ಅವರು ಪದವಿಯ ಅಂತಿಮ ವರ್ಷದ ಸಮಯದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಪ್ರಾರಂಭಿಸಿದರು. ದಿನಕ್ಕೆ ಏಳೆಂಟು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಒಟ್ಟಿಗೆ, ಅವರು ಯುಪಿಎಸ್ಸಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ಅಧ್ಯಯನ ಮಾಡಿದರು.
2019ರ ಯುಪಿಎಸ್ಸಿ ಪರೀಕ್ಷೆಯನ್ನು ಬರೆದ ಅನನ್ಯಾ ಸಿಂಗ್ ಅವರು 51 ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಅವರ ಒಂದು ವರ್ಷದ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಂತಾಗುತ್ತದೆ. ಅನನ್ಯಾ ಅವರು ಐಎಎಸ್ ಅಧಿಕಾರಿಯಾಗಬೇಕೆಂಬ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.