ಗದಗ, ಜು. 13(DaijiworldNews/AA): ಸಂಪೂರ್ಣವಾಗಿ ಮುಡಾದಲ್ಲಿ ಎಕ್ಸೆಂಜ್ ಸೈಟ್ಗಳು ಯಾವ್ಯಾವು ಇವೆ. ಯಾವ ಸಂದರ್ಭದಲ್ಲಿ, ಯಾರಿಗೆ ನೀಡಿದ್ದೀರಿ ಸಂಪೂರ್ಣ ತನಿಖೆ ಆಗಬೇಕು. ಹೀಗಾಗಿ ಸಿಬಿಐ ತನಿಖೆಗೆ ನೀಡಲಿ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಈ ಕುರಿತು ಗದಗದಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಯಾವುದೇ ಸತ್ಯಾಂಶ ಇಲ್ಲವೆಂದರೆ ಇಷ್ಟು ದೊಡ್ಡ ಚರ್ಚೆ ಆಗುತ್ತಿರಲಿಲ್ಲ. ಈ ಹಗರಣದಲ್ಲಿ ಏನೂ ಇಲ್ಲ ಅಂದರೆ ಸ್ವತಂತ್ರವಾಗಿ ಯಾಕೆ ತನಿಖೆಗೆ ಹಿಂಜರಿಕೆ. ವಿಚಾರಣೆ ಮಾಡೋದು ಬೇರೆ, ತನಿಖೆ ಮಾಡುವುದು ಬೇರೆ. ಮುಡಾ ಹಗರಣದ ತನಿಖೆಗೆ ಒಪ್ಪಿಸಬೇಕು. ಯಾವುದೇ ಹಗರಣ ಇಲ್ಲವೆಂದ ಮೇಲೆ ಯಾಕೆ ಭಯ ಪಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಬೇಕಾದದ್ದು ಹೇಳಲಿ. ಎಕ್ಸೆಂಜ್ ಸೈಟ್ ಯಾವ ಯಾವ ಲೇಔಟ್ ನಲ್ಲಿ ಪಡೆದುಕೊಳ್ಳಬೇಕು ಎನ್ನುವ ಕಾನೂನು ಸ್ಪಷ್ಟವಾಗಿ ಉಲ್ಲಂಘನೆ ಆಗಿದೆ. ಯಾವ ಕಾನೂನು ಉಲ್ಲಂಘನೆ ಆಗಿದೆ ಎಂದು ನಮ್ಮ ಪಕ್ಷದ ನಾಯಕರು ತಿಳಿಸಿದ್ದಾರೆ. 50/50 ಯಾವ ಲೇಔಟ್ ನಲ್ಲಿ ನೀಡಬೇಕು ಅಲ್ಲಿ ನೀಡಿಲ್ಲ. ಮೇಲ್ನೋಟಕ್ಕೆ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ. ಯಾವ ಸಂದರ್ಭದಲ್ಲಿ ಸೈಟ್ ಪಡೆದುಕೊಂಡ್ರು, ಯಾವ ರೀತಿ ಪಡೆದುಕೊಂಡರು ಎನ್ನುವ ಪ್ರಶ್ನೆಯಿದೆ ಎಂದು ಹೇಳಿದರು.