ಹುಬ್ಬಳ್ಳಿ, ಜು. 12(DaijiworldNews/AA): ಸಿದ್ದರಾಮಯ್ಯ ಕಡುಭ್ರಷ್ಟ ಅಪ್ರಾಮಾ ಣಿಕ. ಅಹಿಂದ ಅಹಿಂದ ಎಂದುಕೊಂಡು ಎಸ್ ಸಿ, ಎಸ್ ಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿದ್ದಾರೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾದಲ್ಲಿ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ, ಜೋಶಿ ರಾಜೀನಾಮೆ ನೀಡಬೇಕು ಎಂಬ ಲಾಡ್ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ತಿರುಗೇಟು ನೀಡಿದ ಅವರು, ಇಂತಹ ಚಿಲ್ಲರೆ ಹೇಳಿಕೆಗಳಿಗೆ ಮತ್ತು ಅಸಂಬದ್ಧ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ. ಮೋದಿ ಏನು ಸೈಟ್ ತಗೊಂಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ಇದು ದಪ್ಪ ಚರ್ಮದ ಸರ್ಕಾರವಾಗಿದೆ. ಒಂದೂವರೆ ವರ್ಷದಲ್ಲಿ ಸರ್ಕಾರ ಭಯಂಕರ ಬ್ರಷ್ಟಾಚಾರ ಎಸಗಿದೆ. ರಾಹುಲ್ ಗಾಂಧಿ, ಇನ್ನಿತರ ನಾಯಕರಿಂದ ಭಯಂಕರ ಬ್ರಷ್ಟಾಚಾರ ಪ್ರಾರಂಭವಾಗಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು.
ಸಾವಿರಾರು ಕೋಟಿ ಸಂಗ್ರಹ ಮಾಡಿ ತೆಲಂಗಾಣಕ್ಕೆ ಆಗಾಗ ಕೊಟ್ಟಿದ್ದಾರೆ ಎಂದು ಆರೋಪಿಸಿದಾಗ ಕಾಂಗ್ರೆಸ್ ಆಕ್ಷೇಪಿಸಿತ್ತು. ಒಂದು ಸಾವಿರ ಕೋಟಿ ಹಣ ಸಂಗ್ರಹ ಆಗಿದೆ ಎಂದು ನಾನು ಮೊದಲೇ ಹೇಳಿದ್ದೆ. ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನೂರಾರು ಜನರಿಗೆ ಟ್ರಾನ್ಸಫರ್ ಮಾಡಿದ್ದಾರೆ. ನಿನ್ನೆ ಕೆಲ ಅಧಿಕಾರಿಗಳು ಸಿಕ್ಕಿದ್ದರು. ಬೆಂಗಳೂರಿನಲ್ಲಿ ಕೆಲ ಪ್ರಮುಖ ಅಧಿಕಾರಿಗಳು ಸಿಕ್ಕಿದ್ದರು. ಎಲ್ಲ ಹಣ ಹೈದರಾಬಾದ್ ಕಂಪನಿಗಳಿಗೆ ಹಣ ಹೋಗಿದೆ. ಇದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಗೊತ್ತಿದ್ದೇ ಮಾಡಿದ್ದು ಎಂದು ಹೇಳಿದರು.