ಬೆಂಗಳೂರು, ಜು 12(DaijiworldNews/ AK): ಚಿಕ್ಕಮಗಳೂರು ಜಿಲ್ಲೆಯ ಕಂಬಿಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನ ಆರ್. ಟಿ ನಗರದಲ್ಲಿರುವ ಡಿ.ಎಮ್. ಧನಲಕ್ಷ್ಮಿಕುಮಾರಿ ಮತ್ತು ಹುಲಿಯಪ್ಪಗೌಡ ಕೆ ಅವರ ಮಗು ಮನಸ್ಮಿತ ಅವರು ಈ ಹಿಂದೆ 336 ವಿವಿಧ ವಸ್ತುಗಳು, 500 ಪದಗಳನ್ನು ಗುರುತಿಸಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಇವರನ್ನು ಅಸಾಧಾರಣ ಗ್ರಹಣಶಕ್ತಿ ಮೇಧಾವಿ ಎಂದು ತಮ್ಮ ಪುಸ್ತಕದಲ್ಲಿ ನೊಂದಾಯಿಸಿ ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿರುವುದು ಎಲ್ಲರಿಗೂ ತಿಳಿದ ವಿಚಾರ.
ಇದೀಗ ಮನಸ್ಮಿತ ಅವರು ಕೇವಲ 15 ತಿಂಗಳಿಗೆ 1115 ವಸ್ತುಗಳನ್ನು ಗುರುತಿಸಿ ನೊಬೆಲ್ ವಿಶ್ವ ದಾಖಲೆಯ ಎಲ್ಲಾ ದಾಖಲೆಗಳನ್ನು ಮುರಿದು 1115 ವಸ್ತುಗಳನ್ನು ಗುರುತಿಸಿದ ವಿಶ್ವದ ಮೊದಲ ಮಗು ಎಂದು ತನ್ನ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.ಅತಿ ಹೆಚ್ಚು ವಸ್ತುಗಳನ್ನು ಗುರುತಿಸಿದ ವಿಶ್ವದ ಮೊಟ್ಟಮೊದಲ ಮಗು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಮನಸ್ಮಿತ ಅವರು 1115 ಚಿತ್ರಗಳನ್ನು ಗುರುತಿಸಿದ್ದಾರೆ, ಕನ್ನಡ ಮತ್ತು ಇಂಗ್ಲಿಷ್ ವರ್ಣಮಾಲೆಗಳು, ಕರ್ನಾಟಕದಲ್ಲಿ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, 27 ಹಣ್ಣುಗಳು, 12 ಆಕಾರಗಳು, 32 ಕಾಡು ಪ್ರಾಣಿಗಳು, 20 ಸಾಕುಪ್ರಾಣಿಗಳು, 27 ಪಕ್ಷಿಗಳು, 27 ತರಕಾರಿಗಳು, 21 ಹೂವುಗಳು, 29 ಕಾಸ್ಮೆಟಿಕ್ಸ್, 135 ಹೌಸ್ ಹೋಲ್ಡ್ ವಸ್ತುಗಳು, 11 ಭಾರತೀಯ ಕರೆನ್ಸಿ, 23 ಆಟಿಕೆಗಳ ಹೆಸರುಗಳು, 20 ಸಮುದ್ರದಲ್ಲಿ ಸಿಗುವ ವಸ್ತುಗಳು, 11 ಹಿಂದೂ ದೇವರು, 14 ಸಸ್ಯಗಳು, 25 ಎಲೆಗಳು, 24 ಆಹಾರ ವಸ್ತುಗಳು, 22 ಸ್ಟೇಷನರಿ ವಸ್ತುಗಳು, 16 ಎಲೆಕ್ಟ್ರಾನಿಕ್ ವಸ್ತುಗಳು, 12 ಬಣ್ಣಗಳು, ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಸಂಖ್ಯೆಗಳು, 11 ಕ್ರಿಯೆಗಳು, 22 ಆಭರಣಗಳು, 19 ದೇಹದ ಭಾಗಗಳು, 30 ಸ್ವಾತಂತ್ರ್ಯ ಹೋರಾಟಗಾರರು, 24 ಭಾರತದಲ್ಲಿನ ಐತಿಹಾಸಿಕ ಸ್ಥಳಗಳು, 27 ಕರ್ನಾಟಕದಲ್ಲಿನ ಐತಿಹಾಸಿಕ ಸ್ಥಳಗಳು, 34 ಪ್ರಸಿದ್ಧ ಭಾರತೀಯ ವ್ಯಕ್ತಿಗಳು, 14 ವೃತ್ತಿಗಳು, 15 ವಾಹನಗಳು, 15 ವಿಜ್ಞಾನಿಗಳು, 4 ಋತುಗಳು, 27 ದೇಶದ ಧ್ವಜಗಳು, 11 ಉತ್ತಮ ಅಭ್ಯಾಸ, 12 ಸಸ್ಯದ ಭಾಗಗಳು, 16 ಪ್ರಯಾಣಕ್ಕೆ ಅಗತ್ಯ ವಸ್ತುಗಳು, 25 ಚಾಕೊಲೇಟ್ ಬ್ರಾಂಡ್ಗಳು, 25 ಮಗುವಿನ ಅಗತ್ಯ ವಸ್ತುಗಳು, 17 ಕೀಟಗಳು, 14 ಸರೀಸೃಪಗಳು, 13 ಉಭಯಚರಗಳು, 24 ಲಿವಿಂಗ್ ರೂಮ್ ವಸ್ತುಗಳು, 21 ಸಮುದ್ರ ಜೀವಿಗಳು ಒಟ್ಟಾರೆ 1115 ವಸ್ತುಗಳನ್ನು ಗುರುತಿಸಿದ್ದಾರೆ.ಮನಸ್ಮಿತಾ ಅಧಿಕ ವಸ್ತುಗಳನ್ನು ಗುರುತಿಸಿದ ವಿಶ್ವದ ಮೊದಲ ಮಗುವಾಗಿದ್ದಾರೆ.ಕೇವಲ 15 ತಿಂಗಳಿಗೆ ಈಕೆ ದಾಖಲೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಗುವಿನ ತಾಯಿ ಡಿ. ಎಮ್. ಧನಲಕ್ಷ್ಮಿಕುಮಾರಿ ಅವರು ಗೃಹಿಣಿಯಾಗಿದ್ದು, ತಂದೆ ಹುಲಿಯಪ್ಪಗೌಡ ಕೆ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದಾರೆ.
ಹಾಗೆಯೇ ಮನಸ್ಮಿತ ಅವರು ಕನ್ನಡ ವರ್ಣಮಾಲೆಗಳು ಮತ್ತು ಕನ್ನಡ ಸಂಖ್ಯೆಗಳು, ಕನ್ನಡ ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಗುರುತಿಸುವ ಈಕೆಯ ಕನ್ನಡ ಕಲಿಕೆಯನ್ನು ಮತ್ತು ಅಸಾಧಾರಣ ಗ್ರಹಣ ಶಕ್ತಿ , ಅಮೋಘ ಜ್ಞಾನ ಮತ್ತು ವಿಶ್ವದಾದ್ಯಂತ ಕನ್ನಡ ನಾಡಿನ ಕೀರ್ತಿಯನ್ನು ಮೆರೆಸುತ್ತಿರುವ ಇವರ ಕೊಡುಗೆಯನ್ನು ಗುರುತಿಸಿ ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್ (ನೋo) ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಮನಸ್ಮಿತಾಗೆ ರಾಜ್ಯಮಟ್ಟದ ಬನವಾಸಿ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿರುವುದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.
ಆಕೆಯ ಸಾಧನೆಗೆ ಮಗುವಿನ ಪೋಷಕರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮನಸ್ಮಿತ ಅವರ ಕಥೆಯು ಇತರ ಪೋಷಕರಿಗೆ ತಮ್ಮ ಮಕ್ಕಳು ಹೊಂದಿರಬಹುದಾದ ಪ್ರತಿಭೆಯನ್ನು ಅನ್ವೇಷಿಸಲು ಮತ್ತು ಪಾಲಿಸಲು ಪ್ರೇರೇಪಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.