ಮೈಸೂರು, ಜು 11(DaijiworldNews/ AK): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಮುಡಾ ಸದಸ್ಯರೂ ಆಗಿರುವ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಆಗ್ರಹಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಪಾರ್ವತಿ ಸಿದ್ದರಾಮಯ್ಯನವರಿಗೆ ಹಂಚಿಕೆಯಾಗಿರುವ ಸೈಟುಗಳ ಹಗರಣದ ಬಗ್ಗೆ ಮಾತಾಡಿ, ತನಿಖೆ ಮಾಡಲಾಗದಷ್ಟು ಬೃಹತ್ ಹಗರಣವೇನೂ ಇದಲ್ಲ ಎಂದ ರು.
ದೇವೇಗೌಡ ಮುಡಾದ ಸದಸ್ಯನಾಗಿ ತಮ್ಮ ಹೊಣೆಗಾರಿಕೆ ಬಗ್ಗೆ ಮಾತಾಡಿದರು. ಧೃವಕುಮಾರ್ ಅವರು ಕಮೀಶನರ್ ಆಗಿದ್ದಾಗ, ಮುಡಾದಿಂದ ಸ್ವಾಧೀನಕ್ಕೊಳಗಾದ ಜಮೀನು ಒಡೆಯರಿಗೆ 50:50 ರ ಅನುಪಾತದಲ್ಲಿ ನಿವೇಶನ ಹಂಚಿಕೆಯಾಗಬೇಕೆಂಬ ನಿಯಮವನ್ನು ಅನುಸರಿಸಲಾಗಿತ್ತೇ ಹೊರತು ಲ್ಯಾಂಡ್ ಟು ಲ್ಯಾಂಡ್ ನಿಯಮದ ಪ್ರಕಾರ ಅಲ್ಲ ಎಂದು ಹೇಳಿದರು.
ಈಗ ಪ್ರಶ್ನೆ ಎದ್ದಿರೋದು ಪಾರ್ವತಿಯವರ 3.16 ಎಕರೆ ಜಮೀನು ಬಗ್ಗೆ. ಸಿದ್ದರಾಮಯ್ಯನವರೇ ಆ ನಿರ್ದಿಷ್ಟ ಜಮೀನಿನ ಪರಿವರ್ತನೆ ಮಾಡಿಸಿದ್ದಾರೆ, ಡಿನೋಟಿಫೈ ಮಾಡಿಸಿದ್ದಾರೆ ಅಂತ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿವೆ. ಅದು ನಿಜವೇ ಆಗಿದ್ದರೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.