ಪಶ್ಚಿಮ ಬಂಗಾಳ, ಜು. 09(DaijiworldNews/AK): ಭಾರತದ ಅತ್ಯಂತ ಹಠಿಣ ಪರೀಕ್ಷೆಗಳಲ್ಲಿ ಯುಪಿಎಸ್ ಸಿ ಕೂಡ ಒಂದು. ಕೆಲ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಆದರೆ ಕೆಲ ಅಭ್ಯರ್ಥಿಗಳು ಎರಡು-ಮೂರು ಪ್ರಯತ್ನದ ಬಳಿಕ ಉತ್ತೀರ್ಣರಾಗುತ್ತಾರೆ. ಹೀಗೆ ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸ್ಮಿತಾ ಸಬರ್ವಾಲ್ ಅವರ ಯಶೋಗಾಥೆ ಇದು.
ಸ್ಮಿತಾ ಸಬರ್ವಾಲ್ ಅವರು ಪಶ್ಚಿಮ ಬಂಗಾಳದಲ್ಲಿರುವ ಡಾರ್ಜಿಲಿಂಗ್ ನವರು. ಆಕೆಯ ತಂದೆ ಪ್ರಣಬ್ ದಾಸ್ ಅವರು ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಹೈದರಾಬಾದ್ಗೆ ಕರ್ನಲ್ ಆಗಿ ನಿವೃತ್ತರಾದರು.
ಸ್ಮಿತಾ ತನ್ನ ಶಾಲಾ ಶಿಕ್ಷಣವನ್ನು ಹೈದರಾಬಾದ್ನಲ್ಲಿ ಪೂರ್ಣಗೊಳಿಸಿದರು. ಹೈದರಾಬಾದ್ನ ಮರ್ರೆಡ್ಪಲ್ಲಿಯಲ್ಲಿರುವ ಸೇಂಟ್ ಆನ್ಸ್ ನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದಳು. ತನ್ನ 12ನೇ ತರಗತಿ ಐಸಿಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯೊಂದಿಗೆ ಅಗ್ರಸ್ಥಾನ ಗಳಿಸುತ್ತಾರೆ. ಬಳಿಕ ಬಿಕಾಂ ಪದವಿಯನ್ನು ಸೇಂಟ್ ಫ್ರಾನ್ಸಿಸ್ ಡಿಗ್ರಿ ಕಾಲೇಜಿನಲ್ಲಿ ಪೂರ್ಣಗೊಳಿಸುತ್ತಾರೆ.
ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆಯಲು ತಯಾರಿ ನಡೆಸಿದ ಸ್ಮಿತಾ ಅವರು ಪ್ರತಿದಿನ ಆರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. 2000ದಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 4ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ,
ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಸ್ಮಿತಾ ಅವರು 400,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಟಿಎಸ್ ಫೈನಾನ್ಸ್ ಕಾರ್ಪೊರೇಶನ್ನ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಅವರು ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.