ಉತ್ತರಾಖಂಡ, ಜು 06 (DaijiworldNews/ AK): UPSC ಸಿವಿಲ್ ಸರ್ವೀಸಸ್ ಪರೀಕ್ಷೆಯು ಭಾರತದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಭೇದಿಸಲು ಸ್ಪರ್ಧಿಗಳಿಗೆ ತೀವ್ರ ತಯಾರಿ ಅಗತ್ಯವಿದೆ. ಅನೇಕ ಸವಾಲುಗಳ ನಡುವೆಯೂ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಹಲವರು ಯಶಸ್ವಿಯಾಗಿದ್ದಾರೆ.
ಉತ್ತರಾಖಂಡದ ಮಸ್ಸೂರಿ ನಿವಾಸಿಯಾದ ಮಾಧವ್ ಭಾರದ್ವಾಜ್ ಅವರು ಬಾಲ್ಯದಿಂದಲೂ ಇಂಜಿನಿಯರ್ ಆಗುವ ಕನಸು ಕಂಡಿದ್ದ ಅವರು 12ನೇ ತರಗತಿಯ ನಂತರ ಪ್ರಯಾಗರಾಜ್ನ ಎಂಎನ್ಎನ್ಐಟಿಯಲ್ಲಿ ಬಿಟೆಕ್ ಕಂಪ್ಯೂಟರ್ ಸೈನ್ಸ್ಗೆ ಪ್ರವೇಶ ಪಡೆದರು.
ಬಿ.ಟೆಕ್ ಪದವಿ ಪಡೆದ ನಂತರ, ಮಾಧವ್ ಐಐಎಂ ಅಹಮದಾಬಾದ್ನಲ್ಲಿ ಎಂಬಿಎ ಮಾಡಿದರು. ಇದರ ನಂತರ, ಅವರು ಪ್ರಮುಖ ಬಹುರಾಷ್ಟ್ರೀಯ ಕಂಪನಿ ಮೈಕ್ರೋಸಾಫ್ಟ್ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಪಡೆದರು. 2020 ರಲ್ಲಿ ಕೊರೊನಾ ಸಾಂಕ್ರಾಮಿಕವು ಜಗತ್ತನ್ನು ಆವರಿಸಿದಾಗ ಅವರು ದೀರ್ಘಕಾಲದವರೆಗೆ ಮನೆಯಿಂದ ಕೆಲಸ ಮಾಡಿದರು. ಮನೆಯಿಂದಲೇ ಕೆಲಸ ಮಾಡುವ ಸಮಯದಲ್ಲಿ ಮಾಧವ್ ಅವರ ಮನಸ್ಸಿನಲ್ಲಿ ಐಎಎಸ್ ಆಗುವ ಕನಸು ಹುಟ್ಟಿತ್ತು. ಇದರ ನಂತರ ಅವರು ತಮ್ಮ ವೃತ್ತಿಜೀವನದ ಹಾದಿಯನ್ನು ಬದಲಾಯಿಸಲು ನಿರ್ಧರಿಸಿದರು ಮತ್ತು UPSC ನಾಗರಿಕ ಸೇವೆಗಳ ಪರೀಕ್ಷೆಗೆ ಪೂರ್ಣ ಮನಸ್ಸಿನಿಂದ ತಯಾರಿ ಆರಂಭಿಸಿದರು. ಮೊದಲ ಪ್ರಯತ್ನದಲ್ಲಿ ಕೇವಲ ಮೂರು ಅಂಕಗಳ ಕೊರತೆಯಿಂದಾಗಿ ಫೈನಲ್ ಸೆಲೆಕ್ಷನ್ ಕೈತಪ್ಪಿತು.
UPSC ಯ ಮೊದಲ ಪ್ರಯತ್ನದಲ್ಲಿಯೇ ಇಷ್ಟು ಕಡಿಮೆ ಅಂತರದಿಂದ ಸೋತಿದ್ದು ಮಾಧವ್ರನ್ನ ನಿರುತ್ಸಾಹಗೊಳಿಸುವ ಬದಲು ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿತು. ಸ್ವಲ್ಪ ಅಘಾತಕ್ಕೆ ಒಳಗಾಗಿದ್ದರು. ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಭೇದಿಸುತ್ತೇನೆ ಎಂಬ ಭರವಸೆ ಅವರಲ್ಲಿತ್ತು. ಆದರೆ ಒಂದು ವಾರದ ನಂತರ ಎರಡನೇ ಪ್ರಯತ್ನಕ್ಕೆ ಪ್ರಿಲಿಮ್ಸ್ ಇತ್ತು. ಆದ್ದರಿಂದ, ಅವರು ತನ್ನ ಸಂಪೂರ್ಣ ಗಮನವನ್ನು ಮುಂಬರುವ ಪರೀಕ್ಷೆಗೆ ಬದಲಾಯಿಸಿಕೊಂಡರು.
ಮಾಧವ್ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ ಪ್ರಿಲಿಮ್ಸ್, ಮುಖ್ಯ ಮತ್ತು ಸಂದರ್ಶನ ಸುತ್ತುಗಳಲ್ಲಿ ತೇರ್ಗಡೆಯಾದರು. 2022 ರ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅವರು 536 ಶ್ರೇಯಾಂಕ ಗಳಿಸಿದರು. ಮಾಧವ್ ಅವರು ಹಗಲಿನಲ್ಲಿ ಆಫೀಸ್ ಕೆಲಸ ಮಾಡುತ್ತಿದ್ದರು ಮತ್ತು ನಂತರ ರಾತ್ರಿ ನಾಲ್ಕೈದು ಗಂಟೆಗಳ ಕಾಲ ಓದುತ್ತಿದ್ದರು . ರಜೆಯಲ್ಲೂ 10-12 ಗಂಟೆ ಓದುತ್ತಿದ್ದರು. ಪರೀಕ್ಷೆಯ ಕೊನೆಯ ದಿನಗಳಲ್ಲಿ ಅವರು 15-16 ಗಂಟೆಗಳ ಕಾಲ ಅಧ್ಯಯನ ಮಾಡಿದರು. ಅಂತಿಮವಾಗಿ ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು.