ನವದೆಹಲಿ, ಜು 05 (DaijiworldNews/MS):ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಸರ್ಜನಾ ಅವರ ಸಕ್ಸಸ್ ಸ್ಟೋರಿ ಬಗ್ಗೆ ತಿಳಿಯೋಣ.
ಹೆಚ್ಚಿನ ಅಭ್ಯರ್ಥಿಗಳು UPSC ಪರೀಕ್ಷೆಗೆ ತರಬೇತಿಯ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಉದಾಹರಣೆಗಳು ನಮ್ಮ ನಡುವೆ ಇವೆ. ಅವರಲ್ಲಿ ಐಎಎಸ್ ಸರ್ಜನಾ ಯಾದವ್ ಕೂಡ ಒಬ್ಬರು.
ಐಎಎಸ್ ಸರ್ಜನಾ ಯಾದವ್ ಅವರು 2019 ರ ಬ್ಯಾಚ್ ನ ಐಎಎಸ್ ಅಧಿಕಾರಿ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಯಾವುದೇ ಕೋಚಿಂಗ್ ಇಲ್ಲದೆ ಉತ್ತೀರ್ಣರಾದರು.
ಸಾಮಾನ್ಯವಾಗಿ ಜನರು UPSC ಪರೀಕ್ಷೆಯ ತಯಾರಿಗಾಗಿ ತರಬೇತಿಯ ಸಹಾಯವನ್ನು ತೆಗೆದುಕೊಳ್ಳುತ್ತಾರೆ .ಐಎಎಸ್ ಸರ್ಜನಾ ಯಾದವ್ ಯುಪಿಎಸ್ಸಿ ಪರೀಕ್ಷೆಗೆ ಮೂರು ಬಾರಿ ಪ್ರಯತ್ನಿಸಿದ್ದರು. ಎರಡು ಬಾರಿ ವಿಫಲವಾದ ನಂತರ, ಸರ್ಜನಾ ಯಾದವ್ 2019 ರಲ್ಲಿ ತಮ್ಮ ಮೂರನೇ ಪ್ರಯತ್ನದಲ್ಲಿ 126 ನೇ ರ್ಯಾಂಕ್ ಗಳಿಸಿದರು.
ಐಎಎಸ್ ಸರ್ಜನಾ ಯಾದವ್ ದೆಹಲಿಯಲ್ಲಿ ಓದಿದ್ದಾರೆ. ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಸರ್ಜನಾ ಯಾದವ್ ಅವರು TRAI ನಲ್ಲಿ ಸಂಶೋಧನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಉದ್ಯೋಗ ಮಾಡಿಕೊಂಡು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು 2018 ರಲ್ಲಿ ಕೆಲಸವನ್ನು ತೊರೆದರು. ನಂತರ 2019 ರಲ್ಲಿ, ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ, ಸರ್ಜನಾ ಯಾದನ್ ಐಎಎಸ್ ಆದರು.