ಲಕ್ನೋ, ಜು 04 (DaijiworldNews/MS): ಕಾಲ್ತುಳಿತದಿಂದಾಗಿ 121 ಜನರು ಜನರ ಸಾವಿಗೆ ಕಾರಣವಾದ ಹತ್ರಾಸ್ನಲ್ಲಿ ಸತ್ಸಂಗ ನಡೆಸಿದ ಸ್ವಯಂಘೋಷಿತ ದೇವಮಾನವ 'ಭೋಲೆ ಬಾಬಾ' ಗಾಗಿ ಉತ್ತರ ಪ್ರದೇಶ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಮೈನ್ಪುರಿಯಲ್ಲಿರುವ ರಾಮ್ ಕುಟೀರ್ ಚಾರಿಟೇಬಲ್ ಟ್ರಸ್ಟ್ನಲ್ಲಿ ಶೋಧ ನಡೆಸಿದರು.
ಕಾಲ್ತುಳಿತ ಘಟನೆಯ ನಂತರ ಪತ್ತೆಯಾಗದ ಭೋಲೆ ಬಾಬಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಭೋಲೆ ಬಾಬಾ ಇಟಾಹ್ ಜಿಲ್ಲೆಯ ಪಟಿಯಾಲಿ ತೆಹಸಿಲ್ನ ಬಹದ್ದೂರ್ ಗ್ರಾಮದವರು. ಆತ ತಾನು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮಾಜಿ ಉದ್ಯೋಗಿ ಎಂದು ಹೇಳಿಕೊಂಡಿದ್ದಾನೆ.
ಭೋಲೆ ಬಾಬಾ ಯಾರು?
ವಿಶೇಷ ಎಂದರೆ ಆಧುನಿಕ ಧಾರ್ಮಿಕ ವ್ಯಕ್ತಿಗಳಂತೆ, ಭೋಲೆ ಬಾಬಾ ಸಾಮಾಜಿಕ ಮಾಧ್ಯಮದಿಂದ ದೂರವಿದ್ದು ಯಾವುದೇ ಸಾಮಾಜಿಕ ವೇದಿಕೆಯಲ್ಲಿ ಯಾವುದೇ ಅಧಿಕೃತ ಖಾತೆಗಳನ್ನು ಹೊಂದಿಲ್ಲ.
ಈತನ ಮೂಲ ಹೆಸರು ಸೂರಜ್ ಪಾಲ್ ಸಿಂಗ್, ತನ್ನ ಅನುಯಾಯಿಗಳಿಗೆ ಭೋಲೆ ಬಾಬಾ ಎಂದು ಕರೆಯುತ್ತಾರೆ. ಉತ್ತರ ಪ್ರದೇಶದ ಎತಾಹ್ ಜಿಲ್ಲೆಯ ಬಹದ್ದೂರ್ ನಗರಿ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದ್ದ ಈತ ಯುಪಿ ಪೊಲೀಸ್ ಇಲಾಖೆಗೆ ಸೇರಿ 18 ವರ್ಷಗಳ ಕಾಲ ಗುಪ್ತಚರ ಘಟಕದಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದರು. ಆದರೆ, ಇಂಟಲಿಜೆನ್ಸ್ ಬ್ಯೂರೋದಲ್ಲಿ ಕೆಲಸ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾರೆ ಎಂದು ಅವರ ಅನುಯಾಯಿಗಳು ಹೇಳಿದ್ದಾರೆ.
1999 ರಲ್ಲಿ, ಅವರು ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ತನ್ನ ಹೆಸರನ್ನು ನಾರಾಯಣ್ ಸಾಕರ್ ಹರಿ ಎಂದು ಬದಲಾಯಿಸಿಕೊಂಡು ಸತ್ಸಂಗಗಳನ್ನು ನಡೆಸಲು ಪ್ರಾರಂಭಿಸಿದ. ಹೆಚ್ಚಿನ ಸ್ವ-ಶೈಲಿಯ ದೇವಮಾನವರಿಗಿಂತ ಭಿನ್ನವಾಗಿ, ನಾರಾಯಣ ಹರಿ ಅವರು ಬಿಳಿ ಸೂಟ್ ಮತ್ತು ಟೈ ಅಥವಾ ಸರಳವಾದ ಕುರ್ತಾ ಪೈಜಾಮವನ್ನು ಧರಿಸಿ ಅವರ ಪತ್ನಿ ಪ್ರೇಮ್ ಬಾಟಿ ಅವರೊಂದಿಗೆ ಕಾಣಿಸಿಕೊಳ್ಳುತ್ತಾನೆ ಎಂದು ವರದಿಯಾಗಿದೆ
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ 'ಭೋಲೆ ಬಾಬಾ' ಹೆಸರನ್ನು ಎಫ್ಐಆರ್ ನಲ್ಲಿ ಇನ್ನೂ ಉಲ್ಲೇಖಿಸಿಲ್ಲ. ಆಶ್ರಮದ ಭದ್ರತೆ ಪರಿಶೀಲಿಸಲು ಬಂದಿದ್ದೆ. ಇಲ್ಲಿ ಯಾರೂ ಪತ್ತೆಯಾಗಿಲ್ಲ ಎಂದು ಸಿಟಿ ಎಸ್ಪಿ ರಾಹುಲ್ ಮಿಥಾಸ್ ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.