ಹಾವೇರಿ, ಜು.03(DaijiworldNews/AA): ಹಾವೇರಿ ವಿಧಾನಸಭಾ ಉಪ ಚುನಾವಣೆಗೆ ಟಿಕೆಟ್ ಯಾರಿಗೆ ಸಿಗಲಿದೆ ಅನ್ನೋದನ್ನು ಎಐಸಿಸಿ ನಿರ್ಧರಿಸುತ್ತದೆ, ಆದರೆ ಅದಕ್ಕಿನ್ನೂ ಕಾಲಾವಕಾಶವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೆ ಇನ್ನೂ 4 ತಿಂಗಳು ಸಮಯವಿದೆ, ಅದರೆ ಈಗಿಂದಲೇ ಪಕ್ಷ ಸಂಘಟನೆ ಕೆಲಸ ಶುರುಮಾಡಿ, ಮತ ವಿಭಜನೆ ಅಗದಂತೆ ಎಚ್ಚರವಹಿಸಿ ಅಂತ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಂದ ಸೂಚನೆ ಬಂದಿದ್ದು ಅದೇ ನಿಟ್ಟನಲ್ಲಿ ತಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಟಿಕೆಟ್ ಬಹಳಷ್ಟು ಜನ ಕೇಳುತ್ತಿದ್ದಾರೆ, ಕೇಳೋದು ತಪ್ಪು ಅಂತ ಹೇಳಲಾಗಲ್ಲ, ಕೇಳಲು ಅವರು ಸ್ವತಂತ್ರರು ಆದರೆ ಅಂತಿಮ ತೀರ್ಮಾನ ತೆಗೆದುಕೊಳ್ಳೋದು, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಮತ್ತು ಪಕ್ಷದ ಹೈಕಮಾಂಡ್ ಎಂದರು.