ಚಂಡೀಗಢ, ಜು.03(DaijiworldNews/AK): ಕಳೆದ ತಿಂಗಳು ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ , ರಾಜಕಾರಣಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ಗೆ ಕಪಾಳಮೋಕ್ಷ ಮಾಡಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಘಟನೆಯ ನಂತರ ಆಕೆಯನ್ನು ಅಮಾನತು ಮಾಡಲಾಗಿತ್ತು. ಆಕೆಯನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದ್ದು, ಬೆಂಗಳೂರಿಗೆ ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಕೌರ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), ಮತ್ತು 341 (ತಪ್ಪಾದ ಸಂಯಮ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಕಂಗನಾ ಅವರಿಗೆ ದೆಹಲಿಗೆ ವಿಮಾನ ಹತ್ತುವ ಮೊದಲು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಕಾನ್ಸ್ಟೆಬಲ್ ಕಪಾಳಮೋಕ್ಷ ಮಾಡಿದ್ದಾರೆ ಮತ್ತು ನಿಂದಿಸಿದ್ದಾರೆ ಎಂದು ಕಂಗನಾ ಹೇಳಿದ ನಂತರ ಸಿಐಎಸ್ಎಫ್ ಕಾನ್ಸ್ಟೆಬಲ್ ಅನ್ನು ಆರಂಭದಲ್ಲಿ ಬಂಧಿಸಲಾಯಿತು ಮತ್ತು ನಂತರ ಅಮಾನತುಗೊಳಿಸಲಾಯಿತು.
ಘಟನೆ ವಿವರ: ನನಗೆ ಮುಖಕ್ಕೆ ಹೊಡೆದು, ನಿಂದಿಸಲಾಯಿತು. ನಾನು ಸುರಕ್ಷಿತವಾಗಿದ್ದೇನೆ ಆದರೆ ಪಂಜಾಬ್ನಲ್ಲಿನ ಭಯೋತ್ಪಾದನೆಯ ಬಗ್ಗೆ ಕಾಳಜಿ ಹೊಂದಿದ್ದೇನೆ ಎಂದು ಕಂಗಾನ ತಮ್ಮ ಎಕ್ಸ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ "ಪಂಜಾಬ್ನಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರದಲ್ಲಿ ಆಘಾತಕಾರಿ ಏರಿಕೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.
ಕಳೆದ ಎರಡೂವರೆ ವರ್ಷಗಳಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್ಟೆಬಲ್, ಘಟನೆಯ ಬಗ್ಗೆ ರೈತರ ಪ್ರತಿಭಟನೆ ಸಂದರ್ಭದಲ್ಲಿ ಕಂಗನಾ ನೀಡಿದ ಹೇಳಿಕೆಯಿಂದ ತಾನು ಅಸಮಾಧಾನಗೊಂಡು ಹೊಡೆದಿದ್ದೇನೆ ಎಂದು ಹೇಳಿದ್ದರು.
ರೈತರು 100 ರೂ.ಗಾಗಿ ಪ್ರತಿಭಟನೆಗೆ ಕುಳಿತಿದ್ದಾರೆ ಎಂದು ಕಂಗನಾ ಹೇಳಿಕೆ ನೀಡಿದ್ದರು, ಅವರು ಅಲ್ಲಿಗೆ ಹೋಗಿ ಕುಳಿತುಕೊಳ್ಳುತ್ತಾರೆಯೇ? ಈ ಹೇಳಿಕೆ ನೀಡಿದಾಗ ನನ್ನ ತಾಯಿ ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು ಎಂದು ಆಕ್ರೋಶದಿಂದ ನಿಂದಿಸಿದ್ದೇನೆ ಎಂದು ಕೌರ್ ಹೇಳಿಕೆ ನೀಡಿದ್ದರು.