ಕಲಬುರಗಿ, ಜು.01(DaijiworldNews/AA): ಬೀದಿಯಲ್ಲಿ ಬಂದು ಜಗಳ ಆಡೋದು, ನಮ್ಮ ಅಭಿಪ್ರಾಯವನ್ನ ಬೀದಿಯಲ್ಲಿ ಚರ್ಚೆ ಮಾಡೋದು ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿಯಲ್ಲಿ ಬಂದು ಜಗಳ ಆಡೋದು, ಬೀದಿಯಲ್ಲಿ ಚರ್ಚೆ ಮಾಡೋದರಿಂದ ನಾವು ನಮ್ಮ ಕಾರ್ಯಕರ್ತರಿಗೆ ಏನು ಸಂದೇಶ ಕೊಟ್ಟ ಹಾಗೆ ಆಗುತ್ತೆ? ಸಮುದಾಯದ ಹಿರಿಯರು, ನಾಯಕರಿರಬಹುದು ಎಲ್ಲರೂ ಹೈಕಮಾಂಡ್ ಬಳಿ ಕೇಳಬೇಕು. ಸಿಎಂ, ಡಿಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದ್ರೆ ಎಲ್ಲಿ ಕೇಳಬೇಕು, ಅಲ್ಲೇ ಕೇಳಬೇಕು. ಮಾಧ್ಯಮಗಳ ಮುಂದೆ ಕೇಳಿದ್ರೆ ಆಗಲ್ಲ ಎಂದು ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾವ್ಯಾವ ಸಮುದಾಯದವರು ಎಷ್ಟೆಷ್ಟು ಮತ ಹಾಕಿದ್ದಾರೆ ಎಂದು ತಿಳಿದಿದೆ. ಕೆಲ ಸಮುದಾಯದವರಿಗೆ ಮಠಗಳು, ಸ್ವಾಮೀಜಿಗಳು ಇದ್ದಾರೆ. ಇನ್ನೂ ಕೆಲವು ಸಮುದಾಯಗಳು ಸ್ವಾಮೀಜಿಗಳು ಇಲ್ಲದವರು ನಮ್ಮ ಪರವಾಗಿ ಕೆಲಸ ಮಾಡ್ತಿದ್ದಾರೆ. ಆದರೆ ಅವರು ಕೇಳ್ತಿಲ್ಲ. ಪ್ರಹ್ಲಾದ್ ಜೋಶಿ ಅವರು ಇದರ ಬಗ್ಗೆ ಮಾತನಾಡುವುದು ಬಿಟ್ಟು ಅವರ ಮನೆ ಬೆಂಕಿ ಆರಿಸಿಕೊಳ್ಳಲಿ ಎಂದಿದ್ದಾರೆ.