ಉತ್ತರಪ್ರದೇಶ, ಜೂ ೨೩(DaijiworldNews/AA): ಆಕಾಶ್ ಹುಟ್ಟಿದ್ದು ಯುಪಿಯ ಬುಲಂದ್ ಶಹರ್ ನಲ್ಲಿ. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಕಾನ್ಪುರದ ವೀರೇಂದ್ರ ಸ್ವರೂಪ್ ಶಾಲೆಯಲ್ಲಿ ಮಾಡಿದರು. 10ನೇ ತರಗತಿಯಲ್ಲಿ ಶೇ 92 ಹಾಗೂ 12ರಲ್ಲಿ ಶೇ 90 ಅಂಕ ಪಡೆದಿದ್ದಾರೆ.
ಇದರ ನಂತರ ಅವರು ಜೆಇಇ ಪರೀಕ್ಷೆಯನ್ನು ತೆಗೆದುಕೊಂಡು, ಐಐಟಿ ರೂರ್ಕಿಯಲ್ಲಿ ಪ್ರವೇಶ ಪಡೆದಿದ್ದರು. ಆದರೆ ಅವರು ಐಐಐಟಿ ಅಲಹಾಬಾದ್ ನಿಂದ ಬಿ.ಟೆಕ್ ಮಾಡಲು ನಿರ್ಧರಿಸಿದರು. ಇಂಜಿನಿಯರಿಂಗ್ ನಂತರ ಅಮೆರಿಕದ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತು.
ಆದರೆ ಆಕಾಶ್ ಗೆ ಅಮೆರಿಕದ ಕೆಲಸ ಇಷ್ಟವಾಗಲಿಲ್ಲ. ಆಗಲೇ ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದರು. 6 ತಿಂಗಳಲ್ಲಿ ಕೆಲಸ ಬಿಟ್ಟು UPSC ಗೆ ತಯಾರಿ ಆರಂಭಿಸಿದರು. 2012ರಲ್ಲಿ 138ನೇ ರ್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾದರು.
ಆಕಾಶ್ 2021 ರಲ್ಲಿ ಹರಿಯಾಣದ ನಿವಾಸಿ ಡಾ.ಬಬಿತಾ ಅವರನ್ನು ವಿವಾಹವಾದರು. ಅವರ ಪತ್ನಿ ದೆಹಲಿಯ ಕಲಾವತಿ ಆಸ್ಪತ್ರೆಯಲ್ಲಿ ವೈದ್ಯೆ ಆಗಿದ್ದಾರೆ.
ತಂದೆ ಸತ್ಯಪಾಲ್ ಸಿಂಗ್ ತೋಮರ್ ಕೂಡ ಐಎಎಸ್ ಆಗಬೇಕೆಂದು ಬಯಸಿದ್ದರು, ಆದರೆ ಕೆಲವು ಕಾರಣಗಳಿಂದ ಅವರು ತಮ್ಮ ಕನಸನ್ನು ನನಸಾಗಿಸಲು ಸಾಧ್ಯವಾಗಲಿಲ್ಲ. ಇಂಟರ್ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದಾರೆ.
ಪೊಲೀಸ್ ಲೈನ್ ನಲ್ಲಿ ನಿಯೋಜಿಸಲಾದ ಕಾನ್ ಸ್ಟೆಬಲ್ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದ ತಕ್ಷಣ, ಆಕಾಶ್ ಕಾನ್ ಸ್ಟೆಬಲ್ ಖಾತೆಗೆ 10,000 ರೂ. ಹಣ ಹಾಕಿದ್ದರು. ಹೀಗೆ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಹೆಸರು ಗಳಿಸಿದ್ದಾರೆ.