ಆಗ್ರಾ, ಜೂ 21 (DaijiworldNews/ AK): ಯುಪಿಎಸ್ ಸಿ ಪರೀಕ್ಷಾ ಸಾಧಕರಾದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಸಕ್ಷಮ್ ಗೋಯಲ್ ಸಾಧನೆಯ ಒಂದು ಮೆಲುಕು ನೋಟ.
ಸಕ್ಷಮ್ ಕೇವಲ 21ನೇ ವಯಸ್ಸಿನಲ್ಲಿ ಯಾವುದೇ ಕೋಚಿಂಗ್ ಪಡೆಯದೇ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ ಐಎಎಸ್ ಆಗುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.ಐಎಎಸ್ ಅಧಿಕಾರಿ ಸಕ್ಷಮ್ ಗೋಯಲ್ ಯಾವುದೇ ಕೋಚಿಂಗ್ ಇಲ್ಲದೆ ತನ್ನ ಮೊದಲ ಪ್ರಯತ್ನದಲ್ಲಿ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿಯನ್ನು ಭೇದಿಸಿದ್ದಾರೆ.
ಆಗ್ರಾದಲ್ಲಿ ಹುಟ್ಟಿ ಬೆಳೆದ ಸಕ್ಷಮ್ 10ನೇ ತರಗತಿಯಲ್ಲಿ ಉತ್ತೀರ್ಣರಾದ ಬಳಿಕ 2015ರಲ್ಲಿ ದೆಹಲಿಗೆ ತೆರಳಿದರು. ವಸಂತ್ ಕುಂಜ್ ನ ಡೆಲ್ಲಿ ಪಬ್ಲಿಕ್ ಸ್ಕೂಲ್ನಿಂದ 12ನೇ ತರಗತಿ ಉತ್ತೀರ್ಣರಾಗಿದ್ದಾರೆ.
ಶಾಲಾ ಶಿಕ್ಷಣದ ನಂತರ, ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದರು. ಅವರು ಕಾಲೇಜಿನಲ್ಲಿಯೇ ಯುಪಿಎಸ್ ಸಿ ಪರೀಕ್ಷೆಗೆ ತಯಾರಿಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಆರರಿಂದ ಏಳು ಗಂಟೆಗಳ ಕಾಲ ಮೀಸಲಿಟ್ಟಿದ್ದರು.
ಸಕ್ಷಮ್ 2021ರಲ್ಲಿ ಅಖಿಲ ಭಾರತ 27 ನೊಂದಿಗೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ.ಇದು UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಸಕ್ಷಮ್ ಅವರ ಮೊದಲ ಪ್ರಯತ್ನವಾಗಿತ್ತು. ಅವರು 2020 ರಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸಿದ್ದರು. ಆದರೆ ವಯಸ್ಸಿನ ಅರ್ಹತೆಯ 21 ಆಗಿದ್ದರಿಂದ ಅವರು 1 ವರ್ಷ ಕಾಯುವಂತಾಯಿತು. ಅಂತಿಮವಾಗಿ 2021ರಲ್ಲಿ ಪರೀಕ್ಷೆಗೆ ಹಾಜರಾದರು.