ಪಂಜಾಬ್ , ಜೂ 20 (DaijiworldNews/AA): ಇಂದಿನ ಕಾಲದಲ್ಲಿ ಉದ್ಯೋಗ ಸಿಗುವುದು ಕಷ್ಟದ ಮಾತು. ಅದೆಷ್ಟೋ ಜನರು ಉದ್ಯೋಗಕ್ಕಾಗಿ ಪ್ರಯತ್ನಿಸಿ ವಿಫಲವಾದವರೂ ಉಂಟು. ಆದರೆ ವೈದ್ಯ ವೃತ್ತಿಯನ್ನು ರಾಷ್ಟ್ರ ಸೇವೆಗಾಗಿ ತೊರೆದ ಸಲೋನಿ ಸಿದಾನಾ ಅವರ ಯಶೋಗಾಥೆ ಇದು.
ಸಲೋನಿ ಪಂಜಾಬ್ ರಾಜ್ಯದ ಜಲಾಲಾಬಾದ್ ನ ಕೃಷಿಕನ ಮಗಳು. ಸಲೋನಿ ಸಿದಾನ ಅವರು 2012 ರಲ್ಲಿ ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕರೂ ಅವರಲಿದ್ದ ಯುಪಿಎಸ್ ಸಿ ಪರೀಕ್ಷೆ ಬರೆಯ ಬೇಕೆಂಬ ತುಡಿತ ಭಾರತದಲ್ಲಿಯೇ ಉಳಿಯುವಂತೆ ಮಾಡಿತು.
ನಂತರ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದ ಅವರು, ಗ್ರಂಥಾಲಯದಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದರು. ಸಿದಾನ ಅವರ ಒಂದು ವರ್ಷದ ಕಠಿಣ ಅಧ್ಯಯನ ಬಳಿಕ ಯುಪಿಎಸ್ ಸಿ ಪರೀಕ್ಷೆ ಬರುಯುತ್ತಾರೆ. ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆಯಾದ ಅವರು 74 ನೇ ರ್ಯಾಂಕ್ ಪಡೆಯುತ್ತಾರೆ. ಪ್ರಸ್ತುತ ಅವರು ಮಧ್ಯಪ್ರದೇಶದ ಮಾಂಡ್ಲಾದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಇಷ್ಟು ಮಾತ್ರವಲ್ಲದೇ, ಸಲೋನಿ ಉತ್ತಮ ಉದ್ಯೋಗದಲ್ಲಿದ್ದರೂ ಕೂಡ ಆಡಂಬರವಾಗಿ ಮದುವೆಯಾಗದೆ ಕೇವಲ 500 ರೂಪಾಯಿಯಲ್ಲಿ ನ್ಯಾಯಾಲಯದಲ್ಲಿ ತನ್ನ ಮದುವೆಯನ್ನು ನೋಂದಾಯಿಸಿಕೊಂಡು ಸರಳತೆಯನ್ನು ಮೇರೆದಿದ್ದಾರೆ. ಇನ್ನು ಕರ್ತ್ಯದ ಜಾವಬ್ದಾರಿಹೊಂದಿದ್ದ ಸಿದಾನಾ ವೈಯಕ್ತಿಕ ಜೀವನದ ಸಂತೋಷವನ್ನು ಬದಿಗಿಟ್ಟು ವಿವಾಹವಾದ 2 ನೇ ದಿನಕ್ಕೆ ಕರ್ತ್ಯವಕ್ಕೆ ಹಾಜರಾಗುವ ಮೂಲಕ ಒಬ್ಬ ಸರ್ಕಾರಿ ಅಧಿಕಾರಿ ಯಾವ ರೀತಿ ಇರಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.