ಉತ್ತರ ಪ್ರದೇಶ, ಜೂ. 16(DaijiworldNews/AA): ಕೆಲವರು ತಮ್ಮ ಕನಸುಗಳನ್ನು ಪಟ್ಟುಬಿಡದೆ ಎಷ್ಟೇ ಅಡೆತಡೆ ಬಂದರೂ ನನಸಾಗಿಸಿಗೊಳ್ಳುತ್ತಾರೆ. ಈ ರೀತಿಯಾಗಿ ಪಟ್ಟುಬಿಡದೆ ತನ್ನ ಕನಸನ್ನು ನನಸಾಗಿಸಿಕೊಂಡ ಐಪಿಎಸ್ ಅಧಿಕಾರಿ ಅಂಶಿಕಾ ವರ್ಮಾ ಅವರ ಸ್ಪೂರ್ತಿದಾಯಕ ಕತೆ ಇದು.
ಉತ್ತರ ಪ್ರದೇಶದ ಪ್ರಯಾಗ್ರಾಜ್ ನವರಾದ ಅಂಶಿಕಾ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ನೋಯ್ಡಾದಲ್ಲಿ ಮಾಡುತ್ತಾರೆ. ಬಳಿಕ ಅವರು ನೋಯ್ಡಾದ ಗಲ್ಗೋಟಿಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾರೆ. ಅಲ್ಲಿ ಅವರು 2018 ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆಯುತ್ತಾರೆ.
ನಂತರ 2019 ರಲ್ಲಿ ಪ್ರಯಾಗರಾಜ್ನಲ್ಲಿ ಅಂಶಿಕಾ ಅವರು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸುತ್ತಾರೆ. ತಮ್ಮ ಎಲ್ಲಾ ಸಮಯವನ್ನು ಅಧ್ಯಯನಕ್ಕಾಗಿ ಮೀಸಲಿಟ್ಟ ಅಂಶಿಕಾ ಅವರು, ಯುಪಿಎಸ್ ಸಿ ಪರೀಕ್ಷೆಗಾಗಿ ಯಾವುದೇ ತರಬೇತಿಯನ್ನೂ ಪಡೆದುಕೊಳ್ಳಲಿಲ್ಲ. 2020 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅಂಶಿಕಾ ಅವರು ತನ್ನ ಎರಡನೇ ಪ್ರಯತ್ನದಲ್ಲಿ 136 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ.
ಪ್ರಸ್ತುತ, ಅಂಶಿಕಾ ಅವರು 2021ರ ಬ್ಯಾಚ್ನ ಉತ್ತರ ಪ್ರದೇಶ ಕೇಡರ್ ಅಧಿಕಾರಿಯಾಗಿದ್ದಾರೆ. ಮತ್ತು ಗೋರಖ್ಪುರದ ಸಹಾಯಕ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.