ಚಿಕ್ಕಬಳ್ಳಾಪುರ, ಜೂ. 15(DaijiworldNews/AA): ರಾಜ್ಯದ ಜನರಿಗೆ ವಾಸ್ತವ ಏನೆಂಬುದು ಗೊತ್ತಿದೆ. ಯಾರು ಕುತಂತ್ರ ಮಾಡಿದವರಿಗೆ ಅವರಿಗೆ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ದೆಹಲಿಯಿಂದ ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿರುದ್ಧದ ಪೋಕ್ಸೋ ಪ್ರಕರಣ ಹಾಗೂ ಅರೆಸ್ಟ್ ವಾರಂಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾನು ನಿಗದಿತ ಕಾರ್ಯಕ್ರಮದ ಅಂಗವಾಗಿ ದೆಹಲಿಗೆ ತೆರಳಿದ್ದೆ. ಮೊದಲೇ ನಾನು ಜೂನ್ 17ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದೆ. ಆದರೂ ಕೂಡ ಅನಾವಶ್ಯಕವಾಗಿ ಗೊಂದಲ ಉಂಟು ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಹೈಕೋರ್ಟ್ ಕೂಡ ಬಂಧನ ಕುರಿತು ತಡೆಯಾಜ್ಞೆ ನೀಡಿದೆ. ಈಗಲೇ ನಾನು ಯಾರ ಮೇಲೂ ದೂರೋದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.