ನವದೆಹಲಿ, ಜೂ. 09(DaijiworldNews/AK): ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದು, ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ.
ಈ ವೇಳೆ ಕೇಂದ್ರ ಸಚಿವರಾಗಿ 68 ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉತ್ತರ ಪ್ರದೇಶ, ಬಿಹಾರದಿಂದ ತಲಾ 8 ಸಂಸದರಿಗೆ, ಮಹಾರಾಷ್ಟ್ರದ 6, ಗುಜರಾತ್ನ ಐವರು, ಆಂಧ್ರ ಪ್ರದೇಶದ ಮೂವರು, ಪಶ್ಚಿಮ ಬಂಗಾಳ, ತೆಲಂಗಾಣದ ತಲಾ ಇಬ್ಬರು, ಕರ್ನಾಟಕದ ಐವರು ಸಂಸದರು ಹಾಗೂ ಕೇರಳದಲ್ಲಿ ಗೆದ್ದ ಓರ್ವ ಬಿಜೆಪಿ ಸಂಸದನಿಗೆ ಸಚಿವ ಸ್ಥಾನ ಒಲಿದಿದೆ. ಈ ಮೂಲಕ ಬಿಜೆಪಿಗೆ 58 ಸಚಿವ ಸ್ಥಾನ, ಜೆಡಿಯು, ಟಿಡಿಪಿಗೆ ತಲಾ 2 ಸ್ಥಾನ, ಎನ್ಡಿಎ ಮಿತ್ರ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ನೀಡಲಾಗಿದೆ.
ಇನ್ನು ಮೊದಲು ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಮೋದಿ ಬಳಿಕ ರಾಜನಾಥ್ ಸಿಂಗ್ ಬಳಿಕ ಅಮಿತ್ ಶಾ, ಗಡ್ಕರಿ, ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ನಿರ್ಮಲಾ ಸೀತಾರಾಮನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿ.ವೈ. ಚಂದ್ರಚೂಡ್ , ಬಾಲಿವುಡ್ ನಟರು ಭಾಗಿಯಾಗಿದ್ದು, ಅಕ್ಷಯ್ಕುಮಾರ್, ಶಾರುಖ್ ಖಾನ್, ಅನುಪಮ್ ಖೇರ್ ಮಂಡಿ ಕ್ಷೇತ್ರದ ಸಂಸದೆ, ಬಾಲಿವುಡ್ ನಟಿ ಕಂಗನಾ, ಉದ್ಯಮಿ ಮುಕೇಶ್ ಅಂಬಾನಿ, ಪುತ್ರ ಅನಂತ್ ಅಂಬಾನಿ, ಉದ್ಯಮಿ ಗೌತಮ್ ಅದಾನಿ, ಸೂಪರ್ಸ್ಟಾರ್ ರಜಿನಿಕಾಂತ್ ಸಾವಿರಾರು ಜನ ಭಾಗಿಯಾಗಿದ್ದಾರೆ.