ಮೈಸೂರು, ಜೂ 04(DaijiworldNews/MS): 20 ವರ್ಷಗಳ ನಂತರ ರಾಜಮನೆತನಕ್ಕೆ ಅಧಿಕಾರ ನೀಡುವತ್ತ ಮೈಸೂರು ಜನ ನಿರ್ಧರಿಸಿದಂತಿದೆ. ಸದ್ಯದ ಟ್ರೆಂಡ್ ಪ್ರಕಾರ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 519570 (+ 83760) ಗಳಿಸಿದ್ದಾರೆ . ಈ ಹಿಂದೆ ಎರಡು ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷಣ್ 435810 ( -83760) ಗಳಿಸಿದ್ದಾರೆ.
ಮೈಸೂರು ಕ್ಷೇತ್ರ ಸದ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ.
ಎರಡು ಬಾರಿ ಗೆದ್ದು ಬೀಗಿದ್ದ ಹಾಲಿ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ನಿರಾಕರಿಸಿ ಅಚ್ಚರಿ ಮೂಡಿಸಿದ್ದ ಭಾರತೀಯ ಜನತಾ ಪಕ್ಷವೂ, ಸಂಸತ್ ಚುನಾವಣೆಗೆ ಸ್ಪರ್ಧಿಸಲು ಯದುವೀರ್ ಅವರನ್ನು ಬಿಜೆಪಿ ಕರೆ ತಂದಿತ್ತು. ಇದೀಗ ಮೈಸೂರು ಜನತೆ ಸುಮಾರು ರಾಜಮನೆತನದ ಕಡೆ 20 ವರ್ಷಗಳ ನಂತರ ಒಲವು ಮೂಡಿಸಿದ್ದಾರೆ.