ಬೆಂಗಳೂರು, ಜೂ. 03(DaijiworldNews/KA):ಮೋದಿ ಅವರ ನೂರು ದಿನಗಳ ಕಾರ್ಯಕ್ರಮ ರಾಜಕೀಯ ತಂತ್ರದ ಭಾಗ ಎಂ ದು ಉಪ ಮುಖ್ಯಮಂ ತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೂಡಾ ರಾಜಕೀಯ ತಂತ್ರ ಹೊಂದಿದ್ದೇವೆ. ಪ್ರತಿಯೊಂದು ಪಕ್ಷವು ಒಂದೊಂದು ತಂತ್ರ ಅನುಸರಿಸುತ್ತವೆ ಎಂದರು.
ಲೋಕಸಭೆ ಚುನಾವಣೋತ್ತರ ಸಮೀಕ್ಷೆ ಸುಳ್ಳಾಗಲಿದೆ. ಇಂಡಿಯಾ ಒಕ್ಕೂಟ ಬಹುಮತ ಪಡೆದು ಕೇಂದ್ರದಲ್ಲಿ ಸರ್ಕಾ ರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.