ತಿರುವನಂತಪುರಂ, ಜೂ 01(DaijiworldNews/AA): ಲೋಕಸಭಾ ಚುನಾವಣೆಯ 7 ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ಹಲವು ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗುತ್ತಿದೆ. ಈ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಈ ಬಾರಿ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುವ ಸಾಧ್ಯತೆ ಇರುವುದು ದೃಢಪಟ್ಟಿದೆ.
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಯು ಈ ಬಾರಿ ಕೇರಳದಲ್ಲಿ ಖಾತೆ ತೆರೆಯುವ ಸಾಧ್ಯತೆ ಇದೆ ಎಂದು ಹೇಳಿದೆ. ಸಮೀಕ್ಷೆಯ ಅನುಸಾರ ಕಾಂಗ್ರೆಸ್ಗೆ 13 ರಿಂದ 14 ಸ್ಥಾನ, ಬಿಜೆಪಿ 2 ರಿಂದ 3 ಸ್ಥಾನ ಹಾಗೂ ಯುಡಿಎಫ್ 4 ಸ್ಥಾನ ಗಳಿಸಲಿದೆ ಎಂದು ಹೇಳಲಾಗಿದೆ.
ಸಿಎನ್ಎನ್-ನ್ಯೂಸ್18 ಪ್ರಕಾರ ಯುಡಿಎಫ್ 15 ರಿಂದ 18, ಎಲ್ಡಿಎಫ್ 2 ರಿಂದ 5, ಬಿಜೆಪಿ 1 ರಿಂದ 3 ಸ್ಥಾನ ಪಡೆಯಲಿದೆ ಎಂದು ತಿಳಿಸಿದೆ.
ಇನ್ನು ಕೇರಳದೊಂದಿಗೆ ಈ ಬಾರಿ ತಮಿಳುನಾಡಿನಲ್ಲಿ ಕೂಡ ಬಿಜೆಪಿ ಖಾತೆ ತೆರೆರುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಯಲ್ಲಿ ದೃಢಪಟ್ಟಿದೆ.