ನವದೆಹಲಿ,ಮೇ 29 (DaijiworldNews/ AK): ಮೇ 30ರಿಂದ ಎರಡು ದಿನಗಳ ಕಾಲ ಕನ್ಯಾಕುಮಾರಿಯ ವಿವೇ ಕಾನಂದ ಸ್ಮಾರಕದ ಬಳಿ ಧ್ಯಾನ ಪೀ ಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಧ್ಯಾನ ಕಾರ್ಯಕ್ರಮವು ಮಾದರಿ ನೀ ತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೋದಿ ಧ್ಯಾನದ ಸಮಯದಿಂದ 48 ಗಂಟೆಗಳ ನಂತರ(ಜೂನ್ 1) ಅಂತಿಮ ಹಂತದ ಲೋ ಕಸಭೆ ಚುನಾವಣೆ ನಡೆಯಲಿದ್ದು, ಈ ಮೂಲಕ ಮೋ ದಿ ಸಂದರ್ಭದ ಲಾಭ
ಪಡೆಯಲು ಮುಂದಾಗಿದ್ದಾರೆ. ಇದು ಚುನಾವಣೆಯ ಪೂರ್ವ ಅವಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಮೋದಿ ಧ್ಯಾನದ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ನಿರ್ಬಂಧ ಹೇ ರುವಂತೆ ಕೋರಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.ಕಾಂಗ್ರೆಸ್ ನಿಯೋ ಗವು ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಬಿಜೆಪಿಯಿಂದ ಮಾದರಿ ನೀತಿ ಸಂ ಹಿತೆ ಉಲ್ಲಂಘನೆ ಕುರಿತಂತೆ ದೂರು ಸಲ್ಲಿಸಿದೆ.
ನರೇಂ ದ್ರ ಮೋದಿ ಸ್ಪರ್ಧಿಸಿರುವ ವಾರಾಣಸಿ ಸೇ ರಿದಂತೆ ವಿವಿಧೆಡೆ ಜೂನ್ 1ರಂದು ಮತದಾನ ನಡೆಯಲಿದ್ದು, ಈ ಅವಧಿಯಲ್ಲಿ ಮೋದಿ ಧ್ಯಾನ ಕಾರ್ಯ ಕ್ರಮ ನಡೆಸುತ್ತಿರುವುದು ಜನ ಪ್ರತಿನಿಧಿಗಳ ಕಾಯ್ದೆ ಅಡಿ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.